IPL 2025: ಐಪಿಎಲ್ ಧಡೂತಿ ಲೀಗ್ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ (ಐಪಿಎಲ್ 2025) 51 ಪಂದ್ಯಗಳು ಮುಗಿದಿದೆ. ಈ ಪಂದ್ಯಗಳ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ತಂಡ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ ಆರ್ಸಿಬಿ ತಂಡ ಮೂರನೇ ಸ್ಥಾನದಲ್ಲಿದೆ.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಭರದಿಂದ ಸಾಗುತ್ತಿದೆ. ಈಗಾಗಲೇ 51 ಪಂದ್ಯಗಳನ್ನು ಮುಗಿಸಿರುವ ಐಪಿಎಲ್ ಸೀಸನ್-18 ಧಡೂತಿ ಲೀಗ್ ಆಗಿ ಮಾರ್ಪಟ್ಟಿದ್ದರೆ ಹೇಗಿರುತ್ತೆ? ಇಂತಹದೊಂದು ಕಲ್ಪನೆಯನ್ನು ಸಕಾರಗೊಳಿಸಿದ್ದಾರೆ iraniaitech ಹೆಸರಿನ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು. ಐಪಿಎಲ್ನಲ್ಲಿರುವ ಸ್ಟಾರ್ ಆಟಗಾರರನ್ನು ಧಡೂತಿಯಾಗಿ ಚಿತ್ರೀಕರಿಸಿರುವ ಎಐ ವಿಡಿಯೋವೊಂದನ್ನು iraniaitech ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ವಿಶೇಷ ಸೂಚನೆ: ಈ ವಿಡಿಯೋ ಯಾವುದೇ ಬಾಡಿ ಶೇಮಿಂಗ್ನ ದುರುದ್ದೇಶವನ್ನು ಹೊಂದಿಲ್ಲ. ಬದಲಾಗಿ ಆಟಗಾರರು ದಢೂತಿ ದೇಹ ಹೊಂದಿದ್ದರೆ ಹೇಗೆ ಇರುತ್ತಿದ್ದರು ಎಂಬುದನ್ನು ತೋರಿಸಲಷ್ಟೇ ಇಲ್ಲಿ ಹಂಚಿಕೊಳ್ಳಲಾಗಿದೆ. ಹಾಗೆಯೇ ಯಾವುದೇ ರೀತಿಯ ಬಾಡಿ ಶೇಮಿಂಗ್ ಅನ್ನು ಸಹ ನಾವು ಬೆಂಬಲಿಸುತ್ತಿಲ್ಲ ಎಂಬುದನ್ನು ಈ ಮೂಲಕ ದೃಢೀಕರಿಸುತ್ತಿದ್ದೇವೆ.
Published on: May 03, 2025 12:34 PM