ವೋಟು ಹಾಕಿಸಿಕೊಂಡು ಸೊಸೆಗೆ ಮಾತ್ರ ಹಣವೆಂದ್ರೆ ಹೇಗೆ? ಅತ್ತೆ ಪ್ರಶ್ನೆ
ಗೃಹಲಕ್ಷ್ಮಿ ಯೋಜನೆ ಮನೆಯ ಮಹಾಲಕ್ಷಿಯರ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು, ನಮ್ಮ ಬಳಿ ವೋಟು ಹಾಕಿಸಿಕೊಂಡು ಈಗ ಸೊಸೆಗೆ ಮಾತ್ರ 2000 ರೂ. ಅಂದರೆ ಹೇಗೆ ಎಂದು ಅತ್ತೆಯಂದಿರು ಪ್ರಶ್ನಿಸುತ್ತಿದ್ದಾರೆ.
ಫ್ರೀ..ಫ್ರೀ..ಫ್ರೀ…ಅಂತಾನೆ ಚುನಾವಣೆ ಪ್ರಚಾರದ ವೇಳೆ ಐದು ಘೋಷಣೆ ಮೊಳಗಿಸಿದ್ದ ಕಾಂಗ್ರೆಸ್ (Congress) ಸದ್ಯ ಅಧಿಕಾರದ ಗದ್ದುಗೆ ಮೇಲಿದೆ. ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ಗ್ಯಾರಂಟಿ ಜಾರಿಗಾಗಿಯೇ ಸರ್ಕಾರ ಪ್ರಯತ್ನಿಸುತ್ತಿದೆ. ಹಾಗಾಗಿ ರಾಜ್ಯದ ಜನರ ಚಿತ್ತ ಆ 5 ಗ್ಯಾರಂಟಿ ಯೋಜನೆಗಳ ಮೇಲಿದೆ. ಅದರಲ್ಲಿಯೂ ಗೃಹಲಕ್ಷ್ಮಿ ಯೋಜನೆ ಮನೆಯ ಮಹಾಲಕ್ಷ್ಮಿಯರ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ನಮ್ಮ ಬಳಿ ವೋಟು ಹಾಕಿಸಿಕೊಂಡು ಈಗ ಸೊಸೆಗೆ ಮಾತ್ರ 2000 ರೂ. ಅಂದರೆ ಹೇಗೆ? ನಮಗೂ 2000 ರೂ. ಕೊಡಿ ಎಂದು ಅತ್ತೆ ಪ್ರಶ್ನಿಸಿದ್ದಾರೆ. ಒಬ್ಬರಿಗೆ ಮಾತ್ರ ಹಣ ಕೊಡೋದು ಅಂತ ಮೊದಲೇ ಹೇಳಿದ್ರೆ ಮನೆಗೆ ಒಂದೇ ವೋಟ್ ಹಾಕುತ್ತಿದ್ದೇವು ಎನ್ನುತ್ತಾರೆ. ಸರ್ಕಾರ 2000 ರೂ. ಕೊಡುವುದಾದ್ರೆ ಇಬ್ಬರಿಗೆ ಕೊಡಿ, ಇಲ್ಲಾಂದ್ರೆ ಸಂಸಾರದಲ್ಲಿ ಒಡಕ್ಕುಂಟಾಗುತ್ತವೆ ಎನ್ನಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ

ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು

ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್ಡಿಕೆ

ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
