What India Thinks Today: ಮೋದಿ ನಿಜವಾದ ದೇಶಭಕ್ತ, ಭಾರತವನ್ನು ಬಲಿಷ್ಠಗೊಳಿಸುತ್ತಿದ್ದಾರೆ: ಆಸ್ಟ್ರೇಲಿಯಾ ಮಾಜಿ ಪ್ರಧಾನಿ

What India Thinks Today: ಮೋದಿ ನಿಜವಾದ ದೇಶಭಕ್ತ, ಭಾರತವನ್ನು ಬಲಿಷ್ಠಗೊಳಿಸುತ್ತಿದ್ದಾರೆ: ಆಸ್ಟ್ರೇಲಿಯಾ ಮಾಜಿ ಪ್ರಧಾನಿ

ಅಕ್ಷಯ್​ ಪಲ್ಲಮಜಲು​​
|

Updated on:Feb 26, 2024 | 10:45 AM

ಇಂದು ಟಿವಿ 9 ನೆಟ್‌ವರ್ಕ್‌ನ ಜಾಗತಿಕ ಶೃಂಗಸಭೆ 'ವಾಟ್ ಇಂಡಿಯಾ ಟುಡೇ ಥಿಂಕ್ಸ್' ಎರಡನೇ ದಿನಕ್ಕೆ ಕಾಲಿಟ್ಟಿದೆ. ಫೆಬ್ರವರಿ 25 ರ ಭಾನುವಾರದಂದು ಈ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದ ಎರಡನೇ ದಿನವಾದ ಇಂದು ಪ್ರಧಾನಿ ಮೋದಿ, ಸ್ಮೃತಿ ಇರಾನಿ, ಎಸ್. ಜೈಶಂಕರ್, ಅಶ್ವಿನಿ ವೈಷ್ಣವ್ ಮುಂತಾದ ದಿಗ್ಗಜರು ಭಾಗವಹಿಸಲಿದ್ದಾರೆ. ಸದ್ಯ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ, ಟೋನಿ ಅಬಾಟ್ ತಮ್ಮ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಟಿವಿ9ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today) ಗ್ಲೋಬಲ್ ಶೃಂಗಸಭೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ಭಾರತವನ್ನು ಹೊಗಳಿದ್ದಾರೆ. ಭಾರತ ಏಷ್ಯಾದಲ್ಲಿ ಸೂಪರ್ ಪವರ್ ಆಗಿದ್ದು, ವಿಶ್ವದಲ್ಲಿಯೂ ಅದರ ಶಕ್ತಿ ಹೆಚ್ಚುತ್ತಿದೆ ಎಂದು ಮಾಜಿ ಪ್ರಧಾನಿ ಹೇಳಿದರು. ಭಾರತವು ಉಜ್ವಲ ಭವಿಷ್ಯದ ದೇಶ ಎಂದು ಬಹಳ ಸಮಯದಿಂದ ಕೆಲವರು ಹೇಳುತ್ತಿದ್ದಾರೆ. ಭಾರತ ಈಗಾಗಲೇ ದೊಡ್ಡ ಸಾಧನೆಗಳು ಮಾಡುತ್ತಿರುವ ದೇಶವಾಗಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ದೇಶ. ಟೋನಿ ಅಬಾಟ್ ಪ್ರಧಾನಿ ಮೋದಿ ಬಗ್ಗೆಯು ಮಾತನಾಡಿದ್ದಾರೆ. ಪ್ರಧಾನಿ ಮೋದಿಯನ್ನು ನಿಜವಾದ ದೇಶಭಕ್ತ, ಭಾರತವನ್ನು ಬಲಿಷ್ಠಗೊಳಿಸುತ್ತಿದ್ದಾರೆ ಹಾಗೂ ಅವರು ಸಾಮಾನ್ಯ ನಾಯಕರಲ್ಲ ಎಂದರು.

 

Published on: Feb 26, 2024 10:41 AM