ಸಹಸ್ರತಾಲ್ ಶಿಖರದಲ್ಲಿ 9 ಮಂದಿ ಸಾವಿಗೆ ಕಾರಣವೇನು? ಚಾರಣಿಗರ ತಂಡದ ಅಧ್ಯಕ್ಷರು ಹೇಳಿದ್ದೇನು ನೋಡಿ

|

Updated on: Jun 07, 2024 | 10:30 AM

ಉತ್ತರಾಖಂಡದ ಸಹಸ್ರತಾಲ್ ಶಿಖರಕ್ಕೆ ಟ್ರಕ್ಕಿಂಗ್ ತೆರಳಿದ್ದ ರಾಜ್ಯದ ಹಲವು ಮಂದಿ ಮೃತಪಟ್ಟಿದ್ದಾರೆ. ಬದುಕಿದವರ ರಕ್ಷಣೆ ಮಾಡಲಾಗಿದ್ದು, ಮೃತದೇಹಗಳನ್ನು ತರುವ ಕಾರ್ಯ ಪ್ರಗತಿಯಲ್ಲಿದೆ. ಈ ಮಧ್ಯೆ, ಸಹಸ್ರತಾಲ್ ಶಿಖರಕ್ಕೆ ತೆರಳಿದ ಚಾರಣಿಗರ ತಂಡದ ಅಧ್ಯಕ್ಷ ಎಸ್​ಕೆ ಮೆಹ್ತಾ ಜೊತೆ ‘ಟಿವಿ9’ ಮಾತುಕತೆ ನಡೆಸಿ ವಿವರ ಪಡೆದಿದೆ. ಸಹಸ್ರತಾಲ್ ಶಿಖರದಲ್ಲಿ ಏನಾಗಿತ್ತು? ಪರ್ವತಾರೋಹಿಗಳ ಸಾವಿಗೆ ಕಾರಣವೇನು ಎಂಬುದನ್ನು ಅವರು ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ.

ಬೆಂಗಳೂರು, ಜೂನ್ 7: ಉತ್ತರಾಖಂಡದ (Uttarakhand) ಸಹಸ್ರತಾಲ್ ಶಿಖರದಲ್ಲಿ (Sahasratal peak) ಚಾರಣಕ್ಕೆ (Trkking) ತೆರಳಿದ್ದ ವೇಳೆ ಮೃತಪಟ್ಟವರ ಪಾರ್ಥಿವ ಶರೀರಗಳನ್ನು ಬೆಂಗಳೂರಿಗೆ ತರುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಮಧ್ಯೆ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿರುವ ಸಚಿವ ಕೃಷ್ಣಬೈರೇಗೌಡ, 9.45 ಕ್ಕೆ ಇನ್ನೂ ನಾಲ್ಕು ಶವಗಳನ್ನು ತರಲಾಗ್ತಿದೆ. ಉಳಿದ ಎರಡು ಶವಗಳನ್ನು 1 ಗಂಟೆಗೆ ತರಲಾಗುತ್ತದೆ. 9 ಗಂಟೆಯಿಂದ 1 ಗಂಟೆಯೊಳಗೆ ಎಲ್ಲಾ ಶವಗಳನ್ನು ತರುತ್ತೇವೆ. ಮೃತರ ಸಂಬಂಧಿಕರಿಗೆ ಅಗತ್ಯ ಸಹಕಾರ ನೀಡಲಾಗ್ತಿದೆ ಎಂದರು.

ಈಗಾಗಲೇ ಮೂರು ಶವಗಳನ್ನು ಕರೆ ತರಲಾಗಿದೆ. ಶವಗಳಿಗೆ ಗೌರವ ನೀಡಿ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಶವಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರ ಮಾಡಲಾಗಿದೆ. ಬೆಳಗ್ಗೆ 5.45 ಕ್ಕೆ ಮೂರು ಶವಗಳು ಬಂದಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ್​ ಚಾರಣ: ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಿಷ್ಟು

ಈ ಮಧ್ಯೆ, ಸಹಸ್ರತಾಲ್ ಶಿಖರಕ್ಕೆ ತೆರಳಿದ ಚಾರಣಿಗರ ತಂಡದ ಅಧ್ಯಕ್ಷ ಎಸ್​ಕೆ ಮೆಹ್ತಾ ಜೊತೆ ‘ಟಿವಿ9’ ಮಾತುಕತೆ ನಡೆಸಿದ್ದು, ಘಟನೆಯ ಸಂಪೂರ್ಣ ವಿವರ ಪಡೆದುಕೊಂಡಿದೆ. ಸಹಸ್ರತಾಲ್ ಶಿಖರದಲ್ಲಿ ಏನಾಗಿತ್ತು? ಪರ್ವತಾರೋಹಿಗಳ ಸಾವಿಗೆ ಕಾರಣವೇನು ಎಂಬುದನ್ನು ಅವರು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ