ಉತ್ತರಾಖಂಡ್​ ಚಾರಣ: ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಿಷ್ಟು

ಉತ್ತರಾಖಂಡ್​ ಚಾರಣ: ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಿಷ್ಟು

ಕಿರಣ್ ಹನುಮಂತ್​ ಮಾದಾರ್
|

Updated on: Jun 06, 2024 | 6:29 PM

ಉತ್ತರಾಖಂಡ್​ಗೆ (Uttarakhand) ಚಾರಣಕ್ಕೆ ತೆರಳಿದ್ದ ಕರ್ನಾಟಕ ರಾಜ್ಯದ 21 ಜನರ ಪೈಕಿ 9 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ(Krishna Byre Gowda), ‘ ಉತ್ತರಾಖಂಡ್​​ನಲ್ಲಿ ಒಟ್ಟು 9 ಚಾರಣಿಗರು ಮೃತಪಟ್ಟಿದ್ದಾರೆ. 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 9 ಮೃತದೇಹ ಬೆಂಗಳೂರಿಗೆ ಏರ್​ಲಿಫ್ಟ್​​ ಮಾಡಿದ್ದು, ರಾತ್ರಿ 8.45ಕ್ಕೆ ಬೆಂಗಳೂರಿಗೆ ತಲುಪಲಿದ್ದೇವೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

ಬೆಂಗಳೂರು, ಜೂ.06: ಉತ್ತರಾಖಂಡ್​ಗೆ (Uttarakhand) ಚಾರಣಕ್ಕೆ ತೆರಳಿದ್ದ ಕರ್ನಾಟಕ ರಾಜ್ಯದ 21 ಜನರ ಪೈಕಿ 9 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ(Krishna Byre Gowda), ‘ ಉತ್ತರಾಖಂಡ್​​ನಲ್ಲಿ ಒಟ್ಟು 9 ಚಾರಣಿಗರು ಮೃತಪಟ್ಟಿದ್ದಾರೆ. 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 8 ಜನರನ್ನು ಡೆಹ್ರಾಡೂನ್​ಗೆ ಹಾಗೂ ಐವರನ್ನು ಉತ್ತರ ಕಾಶಿಗೆ ಸ್ಥಳಾಂತರ ಮಾಡಲಾಗಿದೆ ಎಂದರು. ಇನ್ನು ಮೃತದೇಹವನ್ನು ಸಾಗಿಸಲು ಏರ್ ಕ್ರಾಫ್ಟ್ ವ್ಯವಸ್ಥೆ ಮಾಡಲು ಉತ್ತರಾಖಂಡ ಸರ್ಕಾರ ಒಪ್ಪಿತ್ತು.  ನಿನ್ನೆ(ಜೂ.05) ಐವರು ಚಾರಣಿಗರ ಮೃತದೇಹ ಸ್ಥಳಾಂತರಿಸಲಾಗಿತ್ತು. ಇಂದು ಬೆಳಗ್ಗೆ ನಾಲ್ವರ ಮೃತದೇಹ ಸ್ಥಳಾಂತರಿಸಲಾಗಿದೆ. 9 ಮೃತದೇಹಗಳನ್ನು ಡೆಹ್ರಾಡೂನ್​​​ಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿಂದ 9 ಮೃತದೇಹ ಬೆಂಗಳೂರಿಗೆ ಏರ್​ಲಿಫ್ಟ್​​ ಮಾಡಿದ್ದು, ರಾತ್ರಿ 8.45ಕ್ಕೆ ಬೆಂಗಳೂರಿಗೆ ತಲುಪಲಿದ್ದೇವೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ