ಸರ್ಕಾರದಿಂದ ಪರಿಹಾರ ಸಿಕ್ಕರೆ ಅದು ಸೆಕಂಡರಿ, ಮೊದಲು ನನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು: ಕವಿತಾ ಚಂದ್ರಶೇಖರನ್

ತಾನು ಹೋರಾಟ ಮಾಡುತ್ತಿರುವುದೇ ಪತಿಯ ಸಾವಿಗೆ ನ್ಯಾಯ ದೊರಕಿಸಲು ಎಂದು ಹೇಳುವ ಕವಿತಾ, ಪತಿ ಬರೆದಿಟ್ಟ ಡೆತ್ ನೋಟ್ ಓದಿರುವೆ; ಅದರಲ್ಲಿ ಅವರು ಸಚಿವರ ಹೆಸರು ಉಲ್ಲೇಖ ಮಾಡಿಲ್ಲ, ಆಫೀಸ್ ಒತ್ತಡ, ಪ್ರದ್ಮನಾಭ, ಪರಶುರಾಮನ್ ಮತ್ತು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನುತ್ತಾರೆ.

ಸರ್ಕಾರದಿಂದ ಪರಿಹಾರ ಸಿಕ್ಕರೆ ಅದು ಸೆಕಂಡರಿ, ಮೊದಲು ನನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು: ಕವಿತಾ ಚಂದ್ರಶೇಖರನ್
|

Updated on: Jun 06, 2024 | 6:48 PM

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation ) ನಡೆದಿರುವ ಹಣಕಾಸಿನ ಭಾರೀ ಅವ್ಯವಹಾರ ಪ್ರಕರಣದಲ್ಲ್ಲಿ (misappropriation of funds) ಇಂದು ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ ಸಚಿವ ಬಿ ನಾಗೇಂದ್ರ (B Nagendra) ರಾಜೀನಾಮೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಮೇಲಧಿಕಾರಿಗಳ ಒತ್ತಡ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡ ನಿಗಮ ಅಧೀಕ್ಷಕ ಪಿ ಚಂದ್ರಶೇಖರನ್ (P Chandrasekaran) ಅವರ ಪತ್ನಿ ಕವಿತಾ ಚಂದ್ರಶೇಖರನ್ (Kavita Chandrasekaran) ಜೊತೆ ಟಿವಿ9 ಶಿವಮೊಗ್ಗ ವರದಿಗಾರ ಮಾತುಕತೆ ನಡೆಸಿದ್ದಾರೆ. ಪತಿಯ ಅಕಾಲಿಕ ದುರ್ಮರಣದಿಂದ ಇನ್ನೂ ಚೇತರಿಸಿಕೊಳ್ಳದ ಕವಿತಾ ಅವರು ಮಂತ್ರಿ ರಾಜೀನಾಮೆ ಸಲ್ಲಿಸುವುದರಿಂದ ಏನು ಪ್ರಯೋಜನ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ತನ್ನ ಪತಿ ಸಾವಿಗೆ ನ್ಯಾಯ ಸಿಗಬೇಕು ಅನ್ನುತ್ತಾರೆ. ಈ ಮಾತುಕತೆಯಲ್ಲಿ ಅವರು ಪದೇಪದೆ ಪತಿಯ ಸಾವಿಗೆ ನ್ಯಾಯ ಸಿಗಬೇಕು ಅನ್ನುತ್ತಾರೆ. ಅವರ ಹೃದಯಲ್ಲಿ ಮಡುಗಟ್ಟಿರುವ ದುಃಖ, ಹತಾಷೆ, ಅಸಹಾಯಕತೆ ಮತ್ತು ನೋವನ್ನು ಸಂಬಂಧ ಪಟ್ಟವರು ಅರ್ಥಮಾಡಿಕೊಳ್ಳಬೇಕು.

ತಾನು ಹೋರಾಟ ಮಾಡುತ್ತಿರುವುದೇ ಪತಿಯ ಸಾವಿಗೆ ನ್ಯಾಯ ದೊರಕಿಸಲು ಎಂದು ಹೇಳುವ ಕವಿತಾ, ಪತಿ ಬರೆದಿಟ್ಟ ಡೆತ್ ನೋಟ್ ಓದಿರುವೆ; ಅದರಲ್ಲಿ ಅವರು ಸಚಿವರ ಹೆಸರು ಉಲ್ಲೇಖ ಮಾಡಿಲ್ಲ, ಆಫೀಸ್ ಒತ್ತಡ ಮತ್ತು ಪ್ರದ್ಮನಾಭ, ಪರಶುರಾಮನ್ ಮತ್ತು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನುತ್ತಾರೆ. ಸಾವಿಗೆ ಶರಣಾಗುವ ಮೊದಲು ಅವರು ಒಂದೂವರೆ ತಿಂಗಳು ಅತೀವ ಡಿಪ್ರಷನ್ ನಲ್ಲಿದ್ದರು. ಅವರ ಮಾನಸಿಕ ಒತ್ತಡಕ್ಕೆ ಕಾರಣರಾದ, ಮಾನಸಿಕ ಕಿರುಕುಳ ನೀಡಿದ ಅಧಿಕಾರಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಕವಿತಾ ಹೇಳುತ್ತಾರೆ.

ಪತಿ ಚಂದ್ರಶೇಖರನ್ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯಾಗಿದ್ದರು, ತನ್ನ ಮಾವ ಕಟ್ಟಿಸಿದ ಈ ಮನೆ ಬಿಟ್ಟರೆ ತಮಗೆ ಬೇರೆ ಆಧಾರವಿಲ್ಲ. ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವೆ, ಓದುತ್ತಿರುವ ಮಕ್ಕಳೊಂದಿಗೆ ಸಂಸಾರ ನಿರ್ವಹಣೆ ಕಷ್ಟವಾಗಿದೆ ಎಂದು ಕವಿತಾ ಹೇಳುತ್ತಾರೆ. ಸರ್ಕಾರದಿಂದ ಯಾವುದೇ ಬಗೆಯ ಪರಿಹಾರ ತನಗೆ ಹೆಚ್ಚು ಮಹತ್ವದಲ್ಲ, ಪತಿಯ ಸಾವಿಗೆ ನ್ಯಾಯ ಸಿಗಬೇಕು ಅದೇ ತನ್ನ ಮೊದಲ ಆದ್ಯತೆ ಎಂದು ಕವಿತಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ನನ್ನ ಪತಿಯ ಸಾವಿಗೆ ನ್ಯಾಯ ಸಿಗಲೇಬೇಕು ಮತ್ತು ಅಸಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಕವಿತಾ, ಚಂದ್ರಶೇಖರ್ ಪತ್ನಿ

Follow us
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್