ಬಿಜೆಪಿ ಹೂಡಿರುವ ಪ್ರಕರಣದಲ್ಲಿ ರಾಹುಲ್ ಗಾಂಧಿ ಹೆಸರು ವಿನಾಕಾರಣ ಸೇರಿಸಲಾಗಿದೆ: ಡಿಕೆ ಶಿವಕುಮಾರ್
ಬಿಜೆಪಿ ತನ್ನ ಮತ್ತು ಸಿದ್ದರಾಮಯ್ಯ ವಿರುದ್ಧ ಕೇಸ್ ಹೂಡಲಿ ಎದುರಿಸಲು ತಯಾರಿದ್ದೇವೆ, ಅದರೆ ರಾಹುಲ್ ಗಾಂಧಿಯವರ ಹೆಸರು ಯಾಕೆ ಎಂದು ಶಿವಕುಮಾರ್ ಪ್ರಶ್ನಿಸಿದರು. ರಾಹುಲ್ ಅವರು ಎಐಸಿಸಿ ಅಧ್ಯಕ್ಷರಲ್ಲ, ಜಾಹೀರಾತಿನಲ್ಲಿ ಅವರ ಫೋಟೋ ಇಲ್ಲ, ಅದಕ್ಕಾಗಿ ಅವರು ಹಣ ನೀಡಿಲ್ಲ, ಸುಖಾಸುಮ್ಮನೆ ಅವರನ್ನು ಪ್ರಕರಣದಲ್ಲಿ ಎಳೆತರಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ (KPCC Office) ಮಾಧ್ಯಮ ಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬಿಜೆಪಿ ಹೂಡಿರುವ ಪ್ರಕರಣವೊಂದರಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ರಾಹುಲ್ ಗಾಂಧಿಯವರು (Rahul Gandhi) ನಾಳೆ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಹೇಳಿದರು. ರಾಜ್ಯ ಬಿಜೆಪಿ ನಾಯಕರು, ಸಿದ್ದರಾಮಯ್ಯ (Siddaramaiah), ರಾಹುಲ್ ಗಾಂಧಿ ಮತ್ತು ತನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ. ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಶನ್ ಸರ್ಕಾರ ಅಂತ ಜಾಹೀರಾತು ನೀಡಿದ್ದಕ್ಕೆ ಕೇಸ್ ಹಾಕಲಾಗಿದೆ. ಅದನ್ನು ನಾವು ಸೃಷ್ಟಿ ಮಾಡಿದ್ದಲ್ಲ, ₹2,500 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಅಗಬಹುದು ಅಂತ ಖುದ್ದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹಾಗೆಯೇ ಪೇಪರ್ ಗಳಲ್ಲಿ ಹೋಟೆಲ್ ಮೆನು ಕಾರ್ಡ್ ಹಾಗೆ ಯಾವ್ಯಾವ ಹುದ್ದೆಗೆ ಎಷ್ಟೆಷ್ಟು ಹಣ ಅಂತ ಮುದ್ರಿಸಿದ್ದರು, ನಾವು ಅದನ್ನೇ ಜಾಹೀರಾತಾಗಿ ಬಳಸಿದ್ದೇವೆ ಎಂದು ಶಿವಕುಮಾರ್ ಹೇಳಿದರು. ಓಕೆ, ಅವರು ತನ್ನ ಮತ್ತು ಸಿದ್ದರಾಮಯ್ಯ ವಿರುದ್ಧ ಕೇಸ್ ಹೂಡಲಿ ಎದುರಿಸಲು ತಯಾರಿದ್ದೇವೆ, ಅದರೆ ರಾಹುಲ್ ಗಾಂಧಿಯವರ ಹೆಸರು ಯಾಕೆ ಎಂದು ಶಿವಕುಮಾರ್ ಪ್ರಶ್ನಿಸಿದರು. ರಾಹುಲ್ ಅವರು ಎಐಸಿಸಿ ಅಧ್ಯಕ್ಷರಲ್ಲ, ಜಾಹೀರಾತಿನಲ್ಲಿ ಅವರ ಫೋಟೋ ಇಲ್ಲ, ಅದಕ್ಕಾಗಿ ಅವರು ಹಣ ನೀಡಿಲ್ಲ, ಸುಖಾಸುಮ್ಮನೆ ಅವರನ್ನು ಪ್ರಕರಣದಲ್ಲಿ ಎಳೆತರಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ