AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆ ಫಲಿತಾಂಶ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ವ್ಯಕ್ತಿಗೆ ವೋಟು ನೀಡಿದ್ದಾರೆ, ಬಿಜೆಪಿಗೆ ಅಲ್ಲ: ಡಿಕೆ ಶಿವಕುಮಾರ್

ಲೋಕಸಭಾ ಚುನಾವಣೆ ಫಲಿತಾಂಶ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ವ್ಯಕ್ತಿಗೆ ವೋಟು ನೀಡಿದ್ದಾರೆ, ಬಿಜೆಪಿಗೆ ಅಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 04, 2024 | 7:11 PM

Share

ರಾಜ್ಯದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ 1 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 10 ಗೆದ್ದಿದ್ದು ಸೀಟು, ಇದರಿಂದ ಜನ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿದ್ದಾರೆ ಅಂತ ಸಾಬೀತಾಗುತ್ತದೆ, 15 ಸೀಟು ಗೆಲ್ಲುವ ನಿರೀಕ್ಷೆ ಇತ್ತು ಆದರೆ ಸಾಧ್ಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದ ಬಳಿಕ ಡಿಕೆ ಶಿವಕುಮಾರ್ (DK Shivakumar) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನರು ನೀಡಿರುವ ತೀರ್ಪನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ (party state president) ಗೌರವಿಸುತ್ತೇನೆ ಎಂದು ಹೇಳಿದ ಅವರು ತತ್ವಜ್ಞಾನಿಗಳ ಹಾಗೆ ಮಾತಾಡುತ್ತಾ ಅಧಿಕಾರದ ರಾಜಕೀಯ ಸೋತಿದೆ ವಿಶ್ವಾಸದ ರಾಜಕೀಯ ಗೆದ್ದಿದೆ, ಭಾವನೆ ಸೋತಿದೆ ಬದಕು ಗೆದ್ದಿದೆ ಅಂತ ಹೇಳಿದರು. ಬಿಜೆಪಿಯವರು ಈ ಬಾರಿ 400 ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಅಂತ ಹೇಳುತ್ತಿದ್ದರು ಆದರೆ ಅವರಿಗದು ಸಾಧ್ಯವಾಗಿಲ್ಲ, ರಾಜ್ಯದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ 1 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 10 ಗೆದ್ದಿದ್ದು ಸೀಟು, ಇದರಿಂದ ಜನ ಗ್ಯಾರಂಟಿ ಯೋಜನೆಗಳನ್ನು (guarantee schemes) ಮೆಚ್ಚಿದ್ದಾರೆ ಅಂತ ಸಾಬೀತಾಗುತ್ತದೆ, 15 ಸೀಟು ಗೆಲ್ಲುವ ನಿರೀಕ್ಷೆ ಇತ್ತು ಆದರೆ ಸಾಧ್ಯವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಜನ ತಮಗೊಂದು ಸಂದೇಶ ನೀಡಿದ್ದಾರೆ, ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ, ಗೆದ್ದಿರುವ ಡಾ ಮಂಜುನಾಥ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅಲ್ಲಿ ಗೆದ್ದಿರೋದು ಒಬ್ಬ ವ್ಯಕ್ತಿ, ಬಿಜೆಪಿಯಲ್ಲ, ತನ್ನ ಕ್ಷೇತ್ರದಲ್ಲ್ಲೂ ಸುರೇಶ್ ಗೆ ಕಡಿಮೆ ಲೀಡ್ ಸಿಕ್ಕಿರೋದನ್ನು ಗಮನಿಸಿದರೆ ಮಂಜುನಾಥ್ ಅವರ ಪ್ರಭಾವ ಎಷ್ಟರಮಟ್ಟಿಗೆ ಗೆಲುವಿನಲ್ಲಿ ಸಹಾಯ ಮಾಡಿದೆ ಅಂತ ಗೊತ್ತಾಗುತ್ತದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Chitradurga Lok Sabha Results 2024 Counting Updates: ದುರ್ಗದ ಕೋಟೆ ಒಡೆಯ ಗೋವಿಂದ ಕಾರಜೋಳ