ಪ್ರಾದೇಶಿಕ ಸಾರಿಗೆ ಅಧಿಕಾರಿಗಳೊಂದಿಗೆ ಬಿಸಿ ವಾಗ್ವಾದ, ರೀಯಲ್ಟರ್ ಕೆಜಿಎಫ್ ಬಾಬು ಹೇಳೋದೇನು?
ತಾನೊಬ್ಬ ಪರಾಜಿತ ಎಮ್ಎಲ್ಎ ಮತ್ತು ಪರಾಜಿತ ಎಮ್ಮೆಲ್ಸಿ ಆಗಿದ್ದು ಸಾರ್ವಜನಿಕ ಬದುಕಿನಲ್ಲಿದ್ದೇನೆ, ಯಾವತ್ತೂ ಕಾನೂನು ಉಲ್ಲಂಘನೆ ಮಾಡಿದವನಲ್ಲ, ತನ್ನ ಕಾರುಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ಕಡೆ ಓಡಾಡುತ್ತಿರುತ್ತವೆ, ಹಾಗಾಗಿ ಟ್ಯಾಕ್ಸ್ ಕಟ್ಟಿರುತ್ತೇನೆ, ಅರ್ಟಿಒ ಅಧಿಕಾರಿಗಳು ವಿನಾಕಾರಣ ತನ್ನೊಂದಿಗೆ ತಗಾದೆ ಶುರುವಿಟ್ಟುಕೊಂಡಿದ್ದಾರೆ ಎಂದು ಕೆಜಿಎಫ್ ಬಾಬು ಹೇಳುತ್ತಾರೆ.
ಬೆಂಗಳೂರು, ಜುಲೈ 22: ರೀಯಲ್ ಎಸ್ಟೇಟ್ ಉದ್ಯಮಿ ಕೆಜಿಎಫ್ ಬಾಬು ಅವರ ದುಬಾರಿ ಹಾಗೂ ಲಕ್ಸುರಿ ಕಾರುಗಳ ತೆರಿಗೆ ಸಂಬಂಧಿಸಿದಂತೆ ಇಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನಗರದ ಜಯಮಹಲ್ನಲ್ಲಿರುವ ಅವರ ಮನೆಗೆ ಆಗಮಿಸಿ ಕಾಗದ ಪತ್ರಗಳ ತಪಾಸಣೆ ನಡೆಸಿದರು. ಬಾಬು ಮತ್ತು ಆರ್ಟಿಓ ಅಧಿಕಾರಿಯ ನಡುವೆ ಬಿಸಿ ವಾಗ್ವಾದ ಈ ಸಂದರ್ಭದಲ್ಲಿ ನಡೆಯಿತು. ನಂತರ ನಮ್ಮ ವರದಿಗಾರನೊಂದಿಗೆ ಮಾತಾಡಿದ ಬಾಬು, ಚಿತ್ರನಟರಾದ ಅಮಿತಾಭ್ ಬಚ್ಚನ್ ಮತ್ತು ಆಮೀರ್ ಖಾನ್ ಅವರಿಂದ ಖರೀದಿಸಿದ ಲಕ್ಸುರಿ ಕಾರುಗಳ ಟ್ಯಾಕ್ಸ್ ಕಟ್ಟುವಂತೆ ಕೇಳುತ್ತಿದ್ದಾರೆ, ಎರಡೂ ಕಾರುಗಳ ಲೈಫ್ ಟೈಮ್ ಟ್ಯಾಕ್ಸ್ ಮಹಾರಾಷ್ಟ್ರದಲ್ಲಿ ಪಾವತಿಸಿದ್ದೇನೆ, ಇಲ್ಲೂ ಕಟ್ಟಬೇಕೆಂಬ ನಿಯಮ ಇದ್ದರೆ, ಅಧಿಕಾರಿಗಳು ಚಾಲನ್ ನೀಡಲಿ, ಕೂಡಲೇ ಪಾವತಿಸುತ್ತೇನೆ ಎನ್ನುತ್ತಾರೆ.
ಇದನ್ನೂ ಓದಿ: ಅರ್ಧ ಆಸ್ತಿಯನ್ನು ನನಗೆ ವೋಟು ನೀಡಿದ ಚಿಕ್ಕಪೇಟೆಯ ಜನಕ್ಕೆ ಹಂಚುತ್ತೇನೆ, ಮಗನಿಗೆ ಕೊಡಲ್ಲ: ಕೆಜಿಎಫ್ ಬಾಬು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
