ಕಮರ್ಷಿಯಲ್ ಟ್ಯಾಕ್ಸ್ ನೋಟೀಸ್ಗಳ ವಿರುದ್ಧ ಇಂದಿನಿಂದ ಹೋರಾಟ ಆರಂಭಿಸಿದ ಸಣ್ಣ ವ್ಯಾಪಾರಿಗಳು
ರಾಜಾಜಿನಗರದ ವ್ಯಾಪಾರಿಯೊಬ್ಬರು; ಕಾಫಿ, ಟೀ ಇಲ್ಲವೆಂದು ಹೇಳುತ್ತಿರುವ ಕಾರಣ ಗ್ರಾಹಕರು ವಾಪಸ್ಸು ಹೋಗುತ್ತಿದ್ದಾರೆ ವ್ಯಾಪಾರದಲ್ಲಿ ಭಾರೀ ಪ್ರಮಾಣದ ಇಳಿಕೆ ಕಾಣುತ್ತಿದೆ. ಆದರೆ ಕಮರ್ಷಿಯಲ್ ತೆರಿಗೆ ಹೊರೆಯಿಂದ ಬಚಾವಾಗಲು ನಾವು 3-4 ದಿನಗಳ ಕಾಲ ನಷ್ಟ ಅನುಭವಿಸಲು ಸಿದ್ಧರಿದ್ದೇವೆ ಎಂದು ಅವರು ಹೇಳುತ್ತಾರೆ. ನಾಡಿದ್ದ್ದು ಅಂದರೆ 25 ರಂದು ಸಣ್ಣ ವ್ಯಾಪಾರಿಗಳು ತಮ್ಮ ಕುಟುಂಬಗಳೊಂದಿಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು, ಜುಲೈ 23: ಕಮರ್ಷಿಯಲ್ ಟ್ಯಾಕ್ಸ್ ನೋಟೀಸ್ಗಳಿಂದ ಭೀತಿಗೊಳಗಾಗಿರುವ ಕಾಂಡಿಮೆಂಟ್ಸ್, ಟೀ ಸ್ಟಾಲ್ ಮತ್ತು ಬೇಕರಿಗಳ ಮಾಲೀಕರು ಇಂದಿನಿಂದ ತಮ್ಮ ಹೋರಾಟ (protest) ಆರಂಭಿಸಿದ್ದಾರೆ. ಹೋರಾಟದ ಮೊದಲ ಭಾಗವಾಗಿ ಅವರು ತಮ್ಮ ಅಂಗಡಿಗಳಲ್ಲಿ ಹಾಲು ಮತ್ತು ಅದರ ಉತ್ಪನ್ನಗಳ ಮಾರಾಟದ ಜೊತೆ ಕಾಫಿ, ಟೀ, ಗ್ರಾಹಕರಿಗೆ ಮಾರುವುದನ್ನು ನಿಲ್ಲಿಸಿದ್ದಾರೆ. ಗ್ರಾಹಕರು ವಿಧಿಯಿಲ್ಲದೆ ಬ್ಲ್ಯಾಕ್ ಟೀ, ಬ್ಲ್ಯಾಕ್ ಕಾಫಿ, ಲೆಮನ್ ಟೀ ಕುಡಿದು ತೃಪ್ತರಾಗುತ್ತಿದ್ದಾರೆ. ಹಾಲು ಕೊಳ್ಳಲು ಅಂಗಡಿಗೆ ಬರುವವರಿಗೆ ಅನುಕೂಲವಾಗಲಿ ಅಂತ ಅವರು ಇವತ್ತು ಹಾಲು ಉತ್ಪನ್ನಗಳ ಮಾರಾಟ ಇಲ್ಲವೆಂದು ಪೇಪರ್ಗಳಲ್ಲಿ ಟೈಪ್ ಮಾಡಿಸಿ ಮೆತ್ತಿದ್ದಾರೆ. ಇವತ್ತು ಹಾಲು ಮತ್ತು ನಾಳೆ ತಂಬಾಕು ಉತ್ಪನ್ನಗಳ ಮಾರಾಟ ಇರೋದಿಲ್ಲ.
ಇದನ್ನೂ ಓದಿ: ಕ್ಯೂಅರ್ ಕೋಡ್ ತೆಗೆದಿಟ್ಟ ಧಾಬಾ ಮಾಲೀಕ, ಯುಪಿಐ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದ ಗ್ರಾಹಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

