ಕ್ಯೂಅರ್ ಕೋಡ್ ತೆಗೆದಿಟ್ಟ ಧಾಬಾ ಮಾಲೀಕ, ಯುಪಿಐ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದ ಗ್ರಾಹಕ
ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಧಾಬಾ ಮಾಲೀಕ, ಯುಪಿಐ ಮೂಲಕ ಹಣ ಸ್ವೀಕರಿಸುವುದು ಸಮಸ್ಯೆ ಸೃಷ್ಟಿಸುತ್ತಿರುವುದರಿಂದ ಅದನ್ನು ತೆಗೆದು ಬಿಟ್ಟಿದ್ದೇವೆ, ಅದ್ರೆ ಜನ ಫೋನ್ಗಳ ಮೂಲಕವೇ ಪೇಮೆಂಟ್ ಮಾಡಲು ಮುಂದಾಗುತ್ತಿದ್ದಾರೆ. ಸರ್ಕಾರ ಏನಾದರೂ ಬದಲೀ ವ್ಯವಸ್ಥೆ ಮಾಡಬೇಕು, ವಾಣಿಜ್ಯ ತೆರಿಗೆಯನ್ನು ತಾವು ಲಕ್ಷಗಟ್ಟಲೆ ನೀಡಲಾಗಲ್ಲ ಎಂದು ಹೇಳುತ್ತಾರೆ.
ಧಾರವಾಡ, ಜುಲೈ 19: ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯವರು ಸಣ್ಣಪುಟ್ಟ ವ್ಯಾಪಾರಿಗಳಿಗೆ, ತರಕಾರಿ ಮಾರುವವರಿಗೆ ಹೋಟೆಲ್, ಧಾಬಾ ನಡೆಸುವವರಿಗೆ ಕಳಿಸುತ್ತಿರುವ ಭಾರೀ ಮೊತ್ತದ ಟ್ಯಾಕ್ಸ್ ನೋಟೀಸ್ಗಳು (tax notice) ತಲ್ಲಣ ಸೃಷ್ಟಿಸಿವೆ. ಯುಪಿಐ ಮೂಲಕ ಹಣ ಸ್ವೀಕರಿಸುವುದೇ ಬೇಡ ಎಂಬ ನಿರ್ಣಯಕ್ಕೆ ಬಹಳಷ್ಟು ವ್ಯಾಪಾರಿಗಳು ಬಂದಂತಿದೆ. ಧಾರವಾಡ ನಗರದ ಹೊರವಲಯದಲ್ಲಿ ಧಾಬಾವೊಂದನ್ನು ನಡೆಸುವ ವ್ಯಕ್ತಿಯೊಬ್ಬರು ತಮ್ಮ ಕ್ಯಾಶ್ ಕೌಂಟರ್ ಮೇಲೆ ನಗದು ಮಾತ್ರ ಬರೆದುಬಿಡುವ ಜೊತೆಗೆ ಬ್ಯಾಂಕ್ನವರು ನೀಡಿದ್ದ ಕ್ಯೂಅರ್ ಕೋಡ್ ಅನ್ನು ತೆಗೆದುಬಿಟ್ಟಿದ್ದಾರೆ. ಅದರೆ ಗ್ರಾಹಕರೊಬ್ಬರು ತನ್ನಲ್ಲಿ ಯುಪಿಐ ಮೂಲಕ ಹಣ ನೀಡುವವುದನ್ನು ಬಿಟ್ರೆ ಬೇರೆ ಆಪ್ಷನ್ ಇಲ್ಲವೆನ್ನುತ್ತಿದ್ದಾರೆ. ಎಂಥ ಸಂದಿಗ್ಧತೆ ಇದು?
ಇದನ್ನೂ ಓದಿ: ತಪ್ಪದ ಕಮರ್ಷಿಯಲ್ ಟ್ಯಾಕ್ಸ್ ಬವಣೆ, ಸರ್ಕಾರಕ್ಕೆ ಪಾಠ ಕಲಿಸಲು ಮುಂದಾದ ಸಣ್ಣ ವರ್ತಕರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

