ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ವಿರಾಟ್ ಕೊಹ್ಲಿಯನ್ನು ಬಲಿಪಶು ಮಾಡುವ ಹುನ್ನಾರ ನಡೆದಿದೆ: ಅನುಪಮಾ ಶೆಣೈ, ಮಾಜಿ ಡಿವೈಎಸ್ಪಿ
ಬೆಂಗಳೂರು ಮೂಲದ ಕಳ್ಳ ಸಾಗಾಣಿಕೆದಾರರ ಮಾಫಿಯಾವೊಂದು ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಗಲಭೆ ನಡೆಸಿದ ದುಷ್ಟರ ಗುಂಪನ್ನು ಬಳಸಿಕೊಂಡು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದ ಪ್ರಕರಣ ಸಂಭವಿಸುವಂತೆ ಮಾಡಿದರು ಅಂತ ಪ್ರಕರಣದ ನ್ಯಾಯಾಂಗ ತನಿಖೆ ನಡೆಸುತ್ತಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ತಾನು 8-ಪುಟಗಳ ಪತ್ರ ಬರೆದಿದ್ದೇನೆ ಎಂದು ಅನುಪಮಾ ಶೆಣೈ ಹೇಳಿದರು.
ಉಡುಪಿ, ಜುಲೈ 19: ಜೂನ್ 4 ರಂದು ಬೆಂಗಳೂರಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ರಾಜ್ಯ ಉಚ್ಚ ನ್ಯಾಯಲಯಕ್ಕೆ ವರದಿಯೊಂದನ್ನು ಸಲ್ಲಿಸಿದ್ದು ಆ ವರದಿಯನ್ನು ಸಾರ್ವಜನಿಕಗೊಳಿಸಬೇಕೆಂದು ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ (Anupama Shenoy, former DySP) ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅನುಪಮಾ, ಸರ್ಕಾರದ ವರದಿಯನ್ನು ಪರಿಶೀಲಿಸಿದ್ದೇಯಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಬಲಿಪಶು ಮಾಡುವ ಹುನ್ನಾರ ನಡೆದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ, ಅದರೆ ಜನ ಸ್ಟೇಡಿಯಂ ಮತ್ತು ವಿಧಾನ ಸೌಧದ ಬಳಿ ಆರ್ಸಿಬಿಯ ಟ್ವೀಟ್ ನೋಡಿ ಬಂದಿದ್ರಾ ಅನ್ನೋದು ಮುಖ್ಯ ಪ್ರಶ್ನೆಯಾಗುತ್ತದೆ ಮತ್ತು ಸಿದ್ದರಾಮಯ್ಯ ಈ ಪ್ರಶ್ನೆಗೆ ಉತ್ತರ ನೀಡಬೇಕು ಎಂದು ಶೆಣೈ ಹೇಳಿದರು.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತಕ್ಕೆ ಕಾರಣ ಬಹಿರಂಗ: ಕುನ್ಹಾ ಸಲ್ಲಿಸಿದ ವರದಿಯಲ್ಲಿದೆ ಸ್ಫೋಟಕ ಅಂಶ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

