ಚುನಾವಣೆಯಲ್ಲಿ ಹೆಂಡತಿಗೆ ದ್ರೋಹ ಬಗೆದ ಕಾಶಪ್ಪನವರ್ರನ್ನು ಶಾಸಕನಾಗಿ ಒಪ್ಪಿಕೊಳ್ಳೋದು ಅನಿವಾರ್ಯ: ವೀರಣ ಅಣ್ಣಿಗೇರಿ, ಪಂಚಮಸಾಲಿ ಸಮಾಜ
ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಆಡಿರುವ ಮಾತುಗಳನ್ನೆಲ್ಲ ಕಾಶಪ್ಪನವರ್ ವಾಪಸ್ಸು ಪಡೆಯಬೇಕು ಮತ್ತು ಅವರ ವಿರುದ್ಧ ಮಾತಾಡುವುದನ್ನು ಕೂಡಲೇ ನಿಲ್ಲಿಸಬೇಕು, ಅವರೊಂದು ವೇಳೆ ಹಾಗೆ ಮಾಡದಿದ್ದರೆ ಪಂಚಮಸಾಲಿ ಸಮಾಜದ ಸದಸ್ಯರು ಅವರ ಮನೆಗೆ ಮುತ್ತಿಗೆ ಹಾಕುವುದು ನಿಶ್ಚಿತ ಎಂದು ವೀರಣ್ಣ ಅಣ್ಣಿಗೇರಿ ಹೇಳಿದರು.
ಬಾಗಲಕೋಟೆ, ಜುಲೈ 19: ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡಲಸಂಗಮ ಪೀಠದ ಸ್ವಾಮೀಜಿ ಬಸವಜಯ ಮೃತ್ಯುಂಜಯ ಸ್ವಾಮಿಗಳ (Basavajaya Mruthyunjaya Swamiji) ಬಗ್ಗೆ ಮಾತಾಡುವಾಗ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ಅನಿಸುತ್ತಾರೆ. ಆದರೆ ಸಮಾಜದ ಮುಖಂಡರು ಇವರ ಬಗ್ಗೆ ಹೇಳೋದೇ ಬೇರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಪಂಚಮಸಾಲಿ ಸಮಾಜದ ಕೆಲ ಮುಖಂಡರು, ಕಾಶಪ್ಪನವರ್ ಅವರನ್ನು ಟ್ರಸ್ಟ್ ಅಧ್ಯಕ್ಷನಾಗಿ ಯಾರೂ ಮಾಡಿಲ್ಲ ಅವರು ಸ್ವಯಂಘೋಷಿತ ಅಧ್ಯಕ್ಷ ಎನ್ನುತ್ತಾರೆ. ವೀರಣ್ಣ ಅನ್ನುವವರು ಪಂಚಮಸಾಲಿ ಸಮಾಜ ಕಟ್ಟುವಾಗ ಕಾಶಪ್ಪನವರ್ ಇನ್ನೂ ಬಚ್ಚಾ, ಲೋಕಸಭಾ ಚುನಾವಣೆಯಲ್ಲಿ ತನ್ನ ಹೆಂಡತಿಗೆ ದ್ರೋಹ ಬಗೆದ ಅವರನ್ನು ನಮ್ಮ ಶಾಸಕ ಅಂತ ಒಪ್ಪಿಕೊಳ್ಳಲು ಮನಸ್ಸಾಗಲ್ಲ, ಆದರೆ ಅನಿವಾರ್ಯ, ಅಧಿಕಾರ ಹೋದ ಬಳಿಕ ಕತ್ತೆಯೂ ಇವರನ್ನು ಮೂಸಲ್ಲ ಎಂದರು.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗಾಗಿ ಸ್ವಾಮೀಜಿ ನಡೆಸಿರುವ ಹೋರಾಟಗಳಲ್ಲಿ ಸಾಥ್ ನೀಡಿದ್ದೇವೆ: ವಿಜಯಾನಂದ ಕಾಶಪ್ಪನವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

