ಬಿಕ್ಲು ಶಿವ ಕೊಲೆ ಪ್ರಕರಣ: ವಿಚಾರಣೆಯಲ್ಲಿ ತನಿಖಾಧಿಕಾರಿ ಕೇಳಿದ ಪ್ರಶ್ನೆಗಳ ವಿವರಣೆ ಭೈರತಿ ಬಸವರಾಜ ನೀಡಲಿಲ್ಲ
ಮಂಗಳವಾರ ರಾತ್ರಿ ಭೀಕರವಾಗಿ ಹತ್ಯೆಗೊಳಗಾದ ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮಿ ದಾಖಲಿಸಿದ ದೂರಿನ ಅನ್ವಯ ಶಾಸಕ ಭೈರತಿ ಬಸವರಾಜ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನ್ನ ಮಗನ ಕೊಲೆಯಲ್ಲಿ ಬಸವರಾಜ ಪಾತ್ರ ಏನೂ ಇಲ್ಲವೆಂದು ನಂತರ ವಿಜಯಲಕ್ಷ್ಮಿ ಹೇಳಿದರೂ ಅವರ ಹೆಸರು ಎಫ್ಐಆರ್ ನಲ್ಲಿ ದಾಖಲಾಗಿರುವ ಕಾರಣ ವಿಚಾರಣೆಗೆ ಕರೆಸಲಾಗಿತ್ತು.
ಬೆಂಗಳೂರು, ಜುಲೈ 19: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ಕೆಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ ಇಂದು ಭಾರತಿ ನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯ ಎದುರು ವಿಚಾರಣೆ ಎದುರಿಸಿದರು. ಹೊರಗೆ ಬಂದ ಬಳಿಕ ಅವರು ಮಾಧ್ಯಮದವವರಿಗೆ ಪೊಲೀಸ್ ಅಧಿಕಾರಿ ಕೇಳಿದ ಪ್ರಶ್ನೆಗಳ ವಿವರ ನೀಡಲಿಲ್ಲ. ಅದನ್ನೆಲ್ಲ ಹೇಳಕ್ಕಾಗಲ್ಲ, ಬುಧವಾರ ಅಂದರೆ ಜುಲೈ 23ರಂದು ಮತ್ತೇ ವಿಚಾರಣೆ ನಡೆಯುತ್ತದೆ, ಹಾಜರಾಗಬೇಕೆಂದು ಹೇಳಿದರು ಎಂದಷ್ಟೇ ಹೇಳಿದರು. ಪತ್ರಕರ್ತರೊಬ್ಬರು ಜಗ ಎಷ್ಟ ವರ್ಷಗಳಿಂದ ಪರಿಚಯ ಅಂತ ಕೇಳಿದಾಗ, ಯಾವ ಜಗನೂ ಪರಿಚಯವಿಲ್ಲ ಎಂದು ಬಸವರಾಜ ಹೇಳಿದರು.
ಇದನ್ನೂ ಓದಿ: ಶಿವಪ್ರಕಾಶ್ ಯಾರು ಅನ್ನೋದೇ ಗೊತ್ತಿಲ್ಲ, ದೂರು ಕೊಟ್ಟ ಮಾತ್ರಕ್ಕೆ ಎಫ್ಐಅರ್ ಆಗುತ್ತದೆಯೇ? ಭೈರತಿ ಬಸವರಾಜ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ