ಪಂಚಮಸಾಲಿ ಮೀಸಲಾತಿಗಾಗಿ ಸ್ವಾಮೀಜಿ ನಡೆಸಿರುವ ಹೋರಾಟಗಳಲ್ಲಿ ಸಾಥ್ ನೀಡಿದ್ದೇವೆ: ವಿಜಯಾನಂದ ಕಾಶಪ್ಪನವರ್
ಬಸವಜಯ ಮೃತ್ಯುಂಜಯ ಸ್ವಾಮಿ ಮತ್ತು ಅವರೊಂದಿಗಿರುವ ಪಂಚಮಸಾಲಿ ಸಮಾಜದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಪರಾಧಿ ಸ್ಥಾನದಲ್ಲಿಡುವ ಪ್ರಯತ್ನ ಮಾಡುತ್ತಿದ್ದಾರೆ, ಬೆಳಗಾವಿಯಲ್ಲಿ ನಡೆದ ಗಲಾಟೆಯಲ್ಲಿ ಕೆಲ ಆರೆಸ್ಸೆಸ್ ಮುಖಂಡರು ಜೊತೆಗೂಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು, ಹಾಗಾಗೇ ಲಾಠಿ ಚಾರ್ಜ್ ಅಗಿತ್ತು ಮತ್ತು ಕೂಡಲಸಂಗಮ ಪೀಠಕ್ಕೆ ಬೀಗ ಹಾಕಿಸುವಷ್ಟು ಕೆಳಮಟ್ಟಕ್ಕೆ ಸಿಎಂ ಇಳಿಯಲ್ಲ ಎಂದು ಕಾಶಪ್ಪನವರ್ ಹೇಳಿದರು.
ಹುಬ್ಬಳ್ಳಿ, ಜುಲೈ 19: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಹುನುಗುಂದ ಶಾಸಕ ಮತ್ತು ಪಂಚಮಸಾಲಿ ಸಮಾಜದ ಪ್ರಮುಖ ಮುಖಂಡ ವಿಜಯಾನಂದ್ ಕಾಶಪ್ಪನವರ್, ಸಮಾಜದ ಸಂಘಟನೆಯಲ್ಲಿ ತಮ್ಮ ಕುಟುಂಬ ಸಕ್ರಿಯವಾಗಿ ಪಾಲ್ಗೊಂಡಿದೆ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿ (Basavajaya Mruthyunjaya Swamiji) ಅವರು ಪಂಚಮಸಾಲಿ ಸಮಾಜಕ್ಕೆ (Panchamasali community) ಮೀಸಲಾತಿಗಾಗಿ ನಡೆಸಿರುವ ಹೋರಾಟದಲ್ಲೂ ಸಾಥ್ ನೀಡಿದ್ದೇವೆ ಎಂದು ಹೇಳಿದರು. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿಬೇಕೆಂದು ದಶಕಗಳಿಂದ ಹೋರಾಡುತ್ತಿದ್ದೇವೆ, ಆದರೆ ತನ್ನನ್ನು ಪಕ್ಷಕ್ಕೆ ಸೀಮಿತಗೊಳಿಸಿ ಹೋರಾಟವನ್ನು ಡೌನ್ ಪ್ಲೇ ಮಾಡಲಾಗುತ್ತಿದೆ ಎಂದು ಕಾಶಪ್ಪನವರ್ ಹೇಳಿದರು.
ಇದನ್ನೂ ಓದಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಕಾವಿ ಸಾಕಾಗಿದೆ, ಖಾದಿ ಬೇಕಾಗಿದೆ: ವಿಜಯಾನಂದ್ ಕಾಶಪ್ಪನವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು

ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
