ಬೇರೆಯವರು ಉಪಯೋಗಿಸಿದ ಬಟ್ಟೆ ಹಾಕ್ತಿದ್ರೆ ಏನಾಗುತ್ತೆ? ಈ ವಿಡಿಯೋ ನೋಡಿ

|

Updated on: Jun 13, 2024 | 6:58 AM

ಮನುಷ್ಯನು ಧರಿಸಿದ ಬಟ್ಟೆಯನ್ನು ಮೂಸಿದ ನಾಯಿ ಆ ವ್ಯಕ್ತಿ ಎಲ್ಲಿದ್ದಾನೆ, ಯಾರು ಎಂಬುವುದನ್ನು ಪತ್ತೆ ಮಾಡುತ್ತಿತ್ತು. ಅಷ್ಟರ ಮಟ್ಟಿಗೆ ಮನುಷ್ಯನ ಧನಾತ್ಮಕ, ಋಣಾತ್ಮಕ ಶಕ್ತಿ ಬಟ್ಟೆಯಲ್ಲಿ ಅಡಗಿರುತ್ತೆ. ಒಬ್ಬರ ಬಟ್ಟೆ ಮತ್ತೊಬ್ಬರು ಹಾಕಿದರೆ ಇಬ್ಬರಿಗೂ ಬಳ್ಳೆಯದಲ್ಲ. ಅಶುಭವದು.

ನಮ್ಮ ಬಳಿ ಹತ್ತಾರು ಜೊತೆ ಬಟ್ಟೆ ಇದ್ದರೂ ನಾವು ಕೆಲವೊಮ್ಮೆ ಸ್ನೇಹಿತರು, ಅಕ್ಕ, ತಂಗಿ ಹೀಗೆ ಕುಟುಂಬದಲ್ಲಿ ನಮ್ಮ ಜೊತೆ ಆಪ್ತರಿರುವವರ ಬಳಿಯಿಂದ ಬಟ್ಟೆ ಕಸಿದು ಹಾಕುವುದುಂಟು. ಆದರೆ ಬೇರೆಯವರ ಬಟ್ಟೆ ಮತ್ತು ಪಾದರಕ್ಷೆಗಳನ್ನು ಧರಿಸಬಾರದು ಎನ್ನಲಾಗುತ್ತೆ. ಏಕೆಂದರೆ ಬಟ್ಟೆ ಸ್ವಚ್ಛವಾಗಿದ್ದರೂ ಚರ್ಮ ರೋಗಗಳು ಬರುವ ಸಾಧ್ಯತೆ ಇರುತ್ತದೆ.

ಇನ್ನು ಜ್ಯೋತಿಷ್ಯದ ಪ್ರಕಾರ ಬೇರೆಯವರು ಉಪಯೋಗಿದ ಬಟ್ಟೆ, ಚಪ್ಪಲಿ ಉಪಯೋಗಿಸಬಾರದು. ಏಕೆಂದರೆ ಅವರ ಕರ್ಮ ನಮಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಬನ್ನಿ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ಬಗ್ಗೆ ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on