ಕೊಲೆ ಆರೋಪಿ ದರ್ಶನ್ ನೋಡಲು ಕಿಕ್ಕಿರಿದು ಸೇರಿದ ಜನರಿಗೆ ಪೊಲೀಸ್ ಲಾಠಿ ರುಚಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಯಿತು. ನಂತರ ಎಲ್ಲರನ್ನೂ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ವಾಪಸ್ ಕರೆದುಕೊಂಡು ಬರಲಾಯಿತು. ಈ ಸಂದರ್ಭದಲ್ಲಿ ನಟ ದರ್ಶನ್ ನೋಡಲು ನೂರಾರು ಅಭಿಮಾನಿಗಳು ಸೇರಿದ್ದರು. ವಾಹನಗಳಿಗೆ ಅಡ್ಡ ಬಂದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬುವವರನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿದ ಆರೋಪ ದರ್ಶನ್ (Darshan) ಮೇಲಿದೆ. ಸಹಚರರ ಜೊತೆ ಸೇರಿ ಈ ಕೃತ್ಯ ನಡಿಸಿದ ಆರೋಪದಲ್ಲಿ ತನಿಖೆ ನಡೆಸಲಾಗುತ್ತಿದೆ. ಇಂದು (ಜೂನ್ 12) ಎಲ್ಲ ಆರೋಪಿಗಳನ್ನು ಘಟನಾ ಸ್ಥಳವಾದ ಪಟ್ಟಣಗೆರೆ ಶೆಡ್ಗೆ ಕರೆದುಕೊಂಡು ಹೋಗಿ ಮಹಜರು ಮಾಡಲಾಯಿತು. ಬಳಿಕ ದರ್ಶನ್ ಮತ್ತು ಸಹಚರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ವಾಪಸ್ ಕರೆದುಕೊಂಡು ಬರಲಾಯಿತು. ಈ ವೇಳೆ ದರ್ಶನ್ ಅವರನ್ನು ನೋಡಲು ನೂರಾರು ಅಭಿಮಾನಿಗಳು (Darshan Fans) ಜಮಾಯಿಸಿದ್ದರು. ದಾರಿಗೆ ಅಡ್ಡ ಬಂದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ದರ್ಶನ್ ಜೊತೆ ಪವಿತ್ರಾ ಗೌಡ ಸೇರಿ ಒಟ್ಟು 17 ಜನರ ಮೇಲೆ ಆರೋಪ ಬಂದಿದ್ದು, 13 ಜನರನ್ನು ಬಂಧಿಸಲಾಗಿದೆ. ನಾಪತ್ತೆ ಆಗಿರುವ 4 ಜನರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 12, 2024 10:49 PM
Latest Videos