‘ಬಘೀರ’ ಸಿನಿಮಾ ನೋಡಿ ಪ್ರಶಾಂತ್ ನೀಲ್ ಹೇಳಿದ್ದೇನು?
ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾಕ್ಕೆ ಕತೆ ನೀಡಿರುವುದು ಪ್ರಶಾಂತ್ ನೀಲ್. ಸಿನಿಮಾ ಬಿಡುಗಡೆ ಆದ ಬಳಿಕ ಪ್ರಶಾಂತ್ ನೀಲ್ ಸಿನಿಮಾ ನೋಡಿದ್ದು, ಸಿನಿಮಾ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಶ್ರೀಮುರಳಿ ಮಾತನಾಡಿದ್ದಾರೆ.
ಕಳೆದ ವಾರ ಬಿಡುಗಡೆ ಆಗಿರುವ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರು ಯಾವುದೇ ಋಣಾತ್ಮಕ ಅಭಿಪ್ರಾಯವನ್ನು ಸಿನಿಮಾ ಬಗ್ಗೆ ವ್ಯಕ್ತಪಡಿಸುತ್ತಿಲ್ಲ. ನೀಟ್ ಆದ, ಬೋರು ಹೊಡೆಸದೆ ನೋಡಿಸಿಕೊಳ್ಳುವ ಸಿನಿಮಾ ಎನ್ನುತ್ತಿದ್ದಾರೆ. ಸಿನಿಮಾದಲ್ಲಿನ ಎಫೆಕ್ಟ್ಸ್ ಮತ್ತು ಆಕ್ಷನ್ ಬಗ್ಗೆ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಸಿನಿಮಾದ ಕತೆ ನೀಡಿದ್ದು ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್. ಸಿನಿಮಾದ ಕತೆಯ ಎಳೆಯನ್ನು ನಿರ್ದೇಶಕ ಡಾ ಸೂರಿಗೆ ಪ್ರಶಾಂತ್ ನೀಡಿದ್ದರು. ಅದನ್ನು ಬೆಳೆಸಿ, ಚಿತ್ರಕತೆ ಮಾಡಿ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಡಾ ಸೂರಿ. ಟಿವಿ9 ಜೊತೆಗೆ ಸಿನಿಮಾ ಬಗ್ಗೆ ಮಾತನಾಡಿದ ನಟ ಶ್ರೀಮುರಳಿ, ‘ಬಘೀರ’ ಸಿನಿಮಾವನ್ನು ನೋಡಿದ ಪ್ರಶಾಂತ್ ನೀಲ್ ಏನು ಹೇಳಿದರು ಎಂದು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 07, 2024 06:33 PM