ಈಶ್ವರಪ್ಪ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದನ್ನೇ ಈಗ ನಾವು ಅವರಿಗೆ ಕೇಳುತ್ತಿದ್ದೇವೆ: ಅರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ

Updated on: Jan 02, 2025 | 3:21 PM

ಈಶ್ವರಪ್ಪ ಪ್ರಕರಣದಲ್ಲಿ ಅವರ ಹೆಸರನ್ನು ಸಾವಿಗೆ ಶರಣಾದ ಸಂತೋಷ್ ತನ್ನ ಡೆತ್ ನೋಟಲ್ಲಿ ಬರೆದಿದ್ದ ಆದರೆ ಸಚಿನ್ ಬರೆದಿರುವವ ಡೆತ್ ನೋಟಲ್ಲಿ ತನ್ನ ಹೆಸರಿಲ್ಲ, ತಾನ್ಯಾಕೆ ರಾಜೀನಾಮೆ ನೀಡಬೇಕು ಅಂತ ಖರ್ಗೆ ಹೇಳಿದ್ದಾರೆಂದು ತಿಳಿಸಿದಾಗ ಅಶೋಕ ಅವರು ಅವರು ಹೆಸರು ಯಾಕಿಲ್ಲ, ಇದೆ ಎಂದು ಹೇಳುತ್ತಾರೆ. ಆದರೆ ಅವರ ಮಾತಿನಲ್ಲಿ ಧೃಡತೆ ಕಾಣೋದಿಲ್ಲ, ತಲೆ ಮಾತ್ರ ಅಲ್ಲಾಡಿಸುತ್ತಾರೆ.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿರೋಧಪಕ್ಷದ ನಾಯಕ ಅರ್ ಅಶೋಕ ಗುತ್ತಿಗೆದಾರ ಸಚಿನ್ ಪಾಂಚಾಳ್ ಸಾವು ಪ್ರಕರಣವನ್ನು ರಾಜ್ಯ ಬಿಜೆಪಿ ಬಹಳ ಗಂಭೀರವಾಗಿ ಪರಿಗಣಿಸಿದೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದ ಹೊರತು ವಿಶ್ರಮಿಸುವುದಿಲ್ಲ ಎಂದರು. ಮಾಜಿ ಸಚಿವ ಕೆಎಸ್ಈಶ್ವರಪ್ಪ ಪ್ರಕರಣದ ನಡೆದಾಗ ಶಾಸಕರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ಏನು ಹೇಳಿದ್ದರು ಅನ್ನೋದನ್ನು ಮಾಧ್ಯಮಗಳಿಗೆ ಓದಿ ಹೇಳಿದ ಅಶೋಕ, ಅವರು ಆಗ ಹೇಳಿದ್ದನ್ನು ಈಗ ಸಚಿವರಾಗಿರುವ ಖರ್ಗೆ ಅವರಿಗೆ ಕೇಳುತ್ತೇವೆ ಎಂದರು. ಈಶ್ವರಪ್ಪ ನಿರ್ದೋಷಿಯೆಂದು ನ್ಯಾಯಲಯ ತೀರ್ಪು ನೀಡಿತ್ತು ಎಂದು ಹೇಳಿದ ಅಶೋಕ, ಪ್ರಿಯಾಂಕ್ ಖರ್ಗೆಯ ರಾಜೀನಾಮೆ ಪಡೆಯುವ ತಾಕತ್ತು ಸಿದ್ದರಾಮಯ್ಯ ಅವರಿಗಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗಾಗಿ ಪ್ರಧಾನಿಯವರಿಗೆ ಪತ್ರ ಬರೆಯುತ್ತೇವೆ: ಸಚಿನ್ ಸಹೋದರಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.