WhatsApp Tricks: ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡೋದು ಹೇಗೆ ಗೊತ್ತಾ?

|

Updated on: Jan 29, 2024 | 8:17 PM

ವಾಟ್ಸ್​​ಆ್ಯಪ್​ನಲ್ಲಿ ಇನ್ನೂ ಕೆಲವು ಆಯ್ಕೆಗಳು ಬೇಕು ಎಂದು ಬಳಕೆದಾರರು ಕೇಳುವುದಿದೆ. ವಾಟ್ಸ್​ಆ್ಯಪ್​ನಲ್ಲಿ ಇಲ್ಲದೇ ಇರುವ, ಆದರೆ ನಮಗೆ ಅಗತ್ಯವಾಗಿ ಬೇಕಾಗಿರುವ ಮೆಸೇಜ್ ಶೆಡ್ಯೂಲ್ ಆಯ್ಕೆಯನ್ನು ಬಳಸಲು ಸಾಧ್ಯವಿದೆ. ಆದರೆ ಅದಕ್ಕಾಗಿ ನೀವು ಥರ್ಡ್​ ಪಾರ್ಟಿ ಅಪ್ಲಿಕೇಶನ್ ಒಂದನ್ನು ಇನ್​ಸ್ಟಾಲ್ ಮಾಡಬೇಕಾಗುತ್ತದೆ.

ವಾಟ್ಸ್​ಆ್ಯಪ್ ಇಂದು ಜನಪ್ರಿಯ ಸಂವಹನ ಮಾಧ್ಯಮವಾಗಿದೆ. ದಿನನಿತ್ಯದ ವಿವಿಧ ಕೆಲಸ, ಕಾರ್ಯಗಳಿಗೆ ವಾಟ್ಸ್​ಆ್ಯಪ್ ಬಳಕೆಯಾಗುತ್ತದೆ. ಫೋಟೊ ಕಳುಹಿಸುವುದು, ವಿಡಿಯೊ ಕಳುಹಿಸುವುದು ಮಾತ್ರವಲ್ಲದೆ, ವಿಡಿಯೊ ಕರೆಗೂ ವಾಟ್ಸ್​ಆ್ಯಪ್ ಬೇಕಾಗುತ್ತದೆ. ವೈಯಕ್ತಿಕ ಚಾಟ್ಸ್ ಮಾತ್ರವಲ್ಲದೆ, ಗ್ರೂಪ್, ಆಫೀಸ್ ಗ್ರೂಪ್, ಫ್ಯಾಮಿಲಿ ಗ್ರೂಪ್ ಎಂದೆಲ್ಲ ವಿವಿಧ ಕೆಲಸಗಳಿಗೆ ವಾಟ್ಸ್​ಆ್ಯಪ್ ಬಳಸಲಾಗುತ್ತದೆ. ವಾಟ್ಸ್​ಆ್ಯಪ್ ಕೂಡ ಕಾಲಕಾಲಕ್ಕೆ ಕಮ್ಯೂನಿಟಿ, ಚಾನಲ್ ಎಂದೆಲ್ಲಾ ವಿವಿಧ ಅಪ್​ಡೇಟ್​ಗಳನ್ನು ನೀಡುತ್ತಾ ಜನರ ಮೆಚ್ಚುಗೆ ಗಳಿಸುತ್ತಿದೆ. ಅದರ ಜತೆಗೇ ಬಳಕೆದಾರರಿಗೆ ಖಾಸಗಿತನ, ಭದ್ರತೆಯನ್ನೂ ಒದಗಿಸುತ್ತದೆ. ಅಂತಹ ವಾಟ್ಸ್​​ಆ್ಯಪ್​ನಲ್ಲಿ ಇನ್ನೂ ಕೆಲವು ಆಯ್ಕೆಗಳು ಬೇಕು ಎಂದು ಬಳಕೆದಾರರು ಕೇಳುವುದಿದೆ. ವಾಟ್ಸ್​ಆ್ಯಪ್​ನಲ್ಲಿ ಇಲ್ಲದೇ ಇರುವ, ಆದರೆ ನಮಗೆ ಅಗತ್ಯವಾಗಿ ಬೇಕಾಗಿರುವ ಮೆಸೇಜ್ ಶೆಡ್ಯೂಲ್ ಆಯ್ಕೆಯನ್ನು ಬಳಸಲು ಸಾಧ್ಯವಿದೆ. ಆದರೆ ಅದಕ್ಕಾಗಿ ನೀವು ಥರ್ಡ್​ ಪಾರ್ಟಿ ಅಪ್ಲಿಕೇಶನ್ ಒಂದನ್ನು ಇನ್​ಸ್ಟಾಲ್ ಮಾಡಬೇಕಾಗುತ್ತದೆ.

Follow us on