ಸಿಬಿಐ ಅಧಿಕಾರಿಗಳನ್ನು ನೋಡಿ ನಾವೇ ಗಡಗಡ ನಡುಗುತ್ತೇವೆ, ಇನ್ನು ಹಳ್ಳಿಜನ ಹೆದರದಿರುತ್ತಾರಾ? ಶಿವಕುಮಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 29, 2022 | 12:58 PM

ಊರ ಜನ ಅಧಿಕಾರಿಗಳೊಂದಿಗೆ ಪೊಲೀಸರನ್ನು ನೋಡಿ ಹೆದರಿ ನನಗೆ ಫೋನ್ ಮಾಡಿದ್ದರು, ಸಿಬಿಐನವರನ್ನು ನೋಡಿ ನಾವೇ ಗಡಗಡ ನಡುಗುತ್ತೇವೆ, ಇನ್ನು ಹಳ್ಳಿಜನ ಹೆದರದೆ ಇರುತ್ತಾರಾ? ಅಂತ ಶಿವಕುಮಾರ ಹೇಳಿದರು.

ಮೈಸೂರು: ಬುಧವಾರದಂದು ಕೇಂದ್ರ ತನಿಖಾ ದಳ ಅಧಿಕಾರಿಗಳು (CBI) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ಊರಲ್ಲಿನ ಜಮೀನು ಆಸ್ತಿ ಪಾಸ್ತಿಗಳ ಪರಿಶೀಲನೆ ನಡೆಸಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ಇಂದು ಮೈಸೂರಲ್ಲಿ (Mysuru) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ ಅವರು, ದಾಳಿ ನಡೆಸ್ತಾ ಇದ್ದಾರೆ, ಏನ್ ಮಾಡೋಕಾಗುತ್ತೆ, ಪ್ರೀತಿ ಜಾಸ್ತಿಯಿರುವವರ ಮನೆಗಳ ಮೇಲೆ ದಾಳಿ ನಡೆಸುತ್ತಾ ಇರ್ತಾರೆ, ಊರ ಜನ ಅಧಿಕಾರಿಗಳೊಂದಿಗೆ ಪೊಲೀಸರನ್ನು ನೋಡಿ ಹೆದರಿ ನನಗೆ ಫೋನ್ ಮಾಡಿದ್ದರು, ಸಿಬಿಐನವರನ್ನು ನೋಡಿ ನಾವೇ ಗಡಗಡ ನಡುಗುತ್ತೇವೆ, ಇನ್ನು ಹಳ್ಳಿ ಜನ ಹೆದರದೆ ಇರುತ್ತಾರಾ? ಅಂತ ಹೇಳಿದರು.