ಬಾಂಬ್ ಬ್ಲಾಸ್ಟ್ ಪ್ರಕರಣ ನಡೆದಾಗ ಕೆಲ ಸಚಿವರು ಅಪ್ರಬುದ್ಧ ಹೇಳಿಕೆ ನೀಡಿದ್ದರು: ಬಸನಗೌಡ ಪಾಟೀಲ್ ಯತ್ನಾಳ್
ಖರ್ಗೆ ಅವರಿಗೆ ಹಿಂದೂ ವಿರೋಧಿ ಹೇಳಿಕೆ ನೀಡುವುದು ಬಿಟ್ಟರೆ ಬೇರೇನೋ ಗೊತ್ತಿದ್ದಂತಿಲ್ಲ ಅವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳಾಗುತ್ತಿವೆ ಮತ್ತು ಕೊಲೆಗಳೂ ನಡೆಯುತ್ತಿವೆ. ತಮಗೆ ನೀಡಿರುವ ದೊಡ್ಡ ಜವಾಬ್ದಾರಿಯನ್ನು ಬಿಟ್ಟು ಖರ್ಗೆ ಬೇರೆಲ್ಲ ಮಾಡುತ್ತಾರೆ ಎಂದು ಬಸನಗೌಡ ಪಾಟೀಲ್ ಹೇಳಿದರು.
ವಿಜಯಪುರ: ಬೆಂಗಳೂರಲ್ಲಿ ಇಲ್ಲವೇ ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಬಾಂಬ್ ಬ್ಲಾಸ್ಟ್ ಆದರೆ ಅದರ ಹಿಂದೆ ಸುಲೇಮಾನ್ (Suleiman), ಅಜ್ಗರ್ ಇಲ್ಲ ಅಹ್ಮದ್ ಹೆಸರಿನ ಜನರಿರುತ್ತಾರೆಯೇ ಹೊರತು ಶಿವಪ್ಪ (Shivappa) ಹೆಸರಿನವನಲ್ಲ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ದಿ ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣ ಒಂದು ಸಾಮಾನ್ಯ ವಿಷಯವಲ್ಲ ಇದರ ಸಮಗ್ರ ತನಿಖೆಯಾಗಬೇಕು ಮತ್ತು ಕೃತ್ಯದ ಹಿಂದಿರುವ ಷಡ್ಯಂತ್ರ ಬಯಲಾಗಬೇಕು ಎಂದು ಹೇಳಿದರು. ವಿರೋಧ ಪಕ್ಷದವರು ವಿಷಯವನ್ನು ಸದನದಲ್ಲ ಚರ್ಚಿಸಿದಾಗ ಕೆಲ ಸಚಿವರು ಅಪ್ರಬುದ್ಧ ಹೇಳಿಕೆಗಳನ್ನು ನೀಡಿದರು. ಗೃಹ ಸಚಿವ ಪರಮೇಶ್ವರ್ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಬೇಡಿ ಅಂತ ಗದರಿದ್ದೂ ಆಯಿತು ಎಂದು ಶಾಸಕ ಹೇಳಿದರು. ಖರ್ಗೆ ಅವರಿಗೆ ಹಿಂದೂ ವಿರೋಧಿ ಹೇಳಿಕೆ ನೀಡುವುದು ಬಿಟ್ಟರೆ ಬೇರೇನೋ ಗೊತ್ತಿದ್ದಂತಿಲ್ಲ ಅವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳಾಗುತ್ತಿವೆ ಮತ್ತು ಕೊಲೆಗಳೂ ನಡೆಯುತ್ತಿವೆ. ತಮಗೆ ನೀಡಿರುವ ದೊಡ್ಡ ಜವಾಬ್ದಾರಿಯನ್ನು ಬಿಟ್ಟು ಖರ್ಗೆ ಬೇರೆಲ್ಲ ಮಾಡುತ್ತಾರೆ ಎಂದು ಬಸನಗೌಡ ಪಾಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಹೇಳಿದ್ದು ಗಣನೆಗೆ ಬರಲ್ಲ, ಸಿಎಂ ಮತ್ತು ನಾನು ಹೇಳೋದು ಮಾತ್ರ ಅಧಿಕೃತ: ಜಿ ಪರಮೇಶ್ವರ್, ಗೃಹ ಸಚಿವ