ಕೋಲಾರದ ಹೋಲ್ ಸೇಲ್ ಮಾರ್ಕೆಟ್ ನಲ್ಲೇ ಒಂದು ಕ್ರೇಟ್ ಟೊಮೆಟೊ ಬೆಲೆ ರೂ. 2,500; ಅಂದರೆ ಕೇಜಿಗೆ ರೂ.170!
ರಿಟೇಲ್ ವ್ಯಾಪಾರಿ ಹೋಲ್ಸೇಲ್ನಲ್ಲಿ ರೂ. 170/ಕೇಜಿಯಂತೆ ಖರೀದಿಸಿ ಸಾಗಣೆ ವೆಚ್ಚ, ಅಂಗಡಿ ಬಾಡಿಗೆ ಮೊದಲಾದವುಗಳನ್ನು ಸೇರಿಸಿ ಪ್ರತಿ ಕೇಜಿಗೆ ಕನಿಷ್ಟ ರೂ.200 ರಂತೆ ಮಾರುತ್ತಾನೆ!
ಕೋಲಾರ: ರಾಜ್ಯದ ಹಲವಾರು ಭಾಗಗಳಲ್ಲಿ ಟೊಮೆಟೊ (tomato) ಕಳುವಾಗುತ್ತಿರುವುದರಲ್ಲಿ ಆಶ್ಚರ್ಯವಿಲ್ಲ ಬಿಡಿ ಸ್ವಾಮಿ. ಯಾಕೆ ಅಂತ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ನಗರದ ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ (ಎಪಿಎಂಸಿ) ಮಾರುಕಟ್ಟೆಯ (APMC market) ಕೆಆರ್ ಎಸ್ ಮಂಡಿಯಲ್ಲಿ (KRS Mandi) ಇಂದು ನಡೆದ ಹರಾಜಿನಲ್ಲಿ ಒಂದು ಕ್ರೇಟ್ ಟೊಮೆಟೊ (crate of tomatoes) (15 ಕೇಜಿ ಟೊಮೆಟೊ) ಮಾರಾಟವಾಗಿದ್ದು ರೂ. 2,500 ಗಳಿಗೆ! ಅಂದರೆ ಪ್ರತಿ ಕೇಜಿ ಟೊಮೆಟೊ ಹಣ್ಣಿನ ಬೆಲೆ ರೂ. 170. ನಿಮಗೆ ಗೊತ್ತಿರಲಿ, ಇದು ಹೋಲ್ ಸೇಲ್ ಧಾರಣೆ. ಅಷ್ಟು ದುಡ್ಡಿಗೆ ಖರೀದಿಸುವ ರಿಟೇಲ್ ವ್ಯಾಪಾರಿ, ಸಾಗಣೆ ವೆಚ್ಚ, ಅಂಗಡಿಯ ಬಾಡಿಗೆ ಮೊದಲಾದವುಗಳನ್ನು ಸೇರಿಸಿ ಪ್ರತಿ ಕೇಜಿಗೆ ಕನಿಷ್ಟ ರೂ.200 ರಂತೆ ಮಾರುತ್ತಾನೆ! ಟೊಮೆಟೊ ಮತ್ತು ಬಂಗಾರದ ಮೊಟ್ಟೆಯಿಡುವ ಕೋಳಿ ನಡುವೆ ವ್ಯತ್ಯಾಸವೇನೂ ಇರಲಾರದು. ಹಾಗಾಗೇ, ರಾಜ್ಯದಲ್ಲಿ ಟೊಮೆಟೊ ಕಳುವಿನ ಪ್ರಕರಣಗಳು ಹೆಚ್ಚುತ್ತಿವೆ, ಸ್ವಾಮಿ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ