Shakti Scheme Effect: ಮಂತ್ರಾಲಯ ರಾಯರ ಮಠದಲ್ಲಿ ಭಕ್ತರ ದಾಖಲೆಯ ಸುಮಾರು ರೂ. 3 ಕೋಟಿ ಕಾಣಿಕೆ ಸಂಗ್ರಹ!
ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಮಹಿಳೆಯರು ಪುಣ್ಯಕ್ಷೇತ್ರ, ದೇವಸ್ಥಾನಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ.
ರಾಯಚೂರು: ನಗರದಿಂದ 40 ಕಿಮೀ ದೂರದಲ್ಲಿರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt) (ರಾಯರ ಮಠ) ಭಕ್ತರಿಂದ ದಾಖಲೆಯ ಕಾಣಿಕೆ (offerings) ಸಂಗ್ರಹವಾಗಿದೆ. ದೇವಸ್ಥಾನದ ಅಡಳಿತ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ಕಳೆದ 27 ದಿನಗಳಲ್ಲಿ ಮಠದ ಹುಂಡಿಗಳಲ್ಲಿ ಸಂಗ್ರಹವಾಗಿರುವ ಹಣ 2 ಕೋಟಿ 89 ಲಕ್ಷ 96 ಸಾವಿರದ 295 ರೂ. ಗಳು. ಇದಲ್ಲದೆ 5 ಲಕ್ಷ 83 ಸಾವಿರ ಮೌಲ್ಯದಷ್ಟು ನಾಣ್ಯಗಳು ಹುಂಡಿಯಲ್ಲಿ ಸಂಗ್ರಹವಾಗಿವೆ. ಮಠಕ್ಕೆ ಭೇಟಿ ನೀಡುವ ಭಕ್ತರು 57 ಗ್ರಾಂ ಚಿನ್ನ ಮತ್ತು 910 ಗ್ರಾಂ ತೂಕದಷ್ಟು ಬೆಳ್ಳಿ ಆಭರಣಗಳನ್ನೂ ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ರಾಜ್ಯ ಸರ್ಕಾರ ಶಕ್ತಿ ಯೋಜನೆ (Shakti Scheme) ಜಾರಿಗೆ ತಂದ ಬಳಿಕ ಮಹಿಳೆಯರು ಪುಣ್ಯಕ್ಷೇತ್ರ, ದೇವಸ್ಥಾನಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ