Chamarajapet Eidgah Maidan: ಬಕ್ರೀದ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾರ-ತುರಾಯಿಗಳಿಂದ ಸನ್ಮಾನ ಬೇಡ ಎಂದು ಸಾರಿರುವ ಮುಖ್ಯಮಂತ್ರಿ ಇಲ್ಲೂ ತಮ್ಮ ಮಾತಿಗೆ ಬದ್ಧರಾಗಿದ್ದರು.
ಬೆಂಗಳೂರು: ರಾಜ್ಯದಾದ್ಯಂತ ಬಕ್ರೀದ್ ಹಬ್ಬವನ್ನು (Bakrid) ಮುಸ್ಲಿಂ ಸಮುದಾಯ ಸಂಭ್ರಮ ಸಡಗರದಿಂದ ಆಚರಿಸುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಾಗಿಯಾಗಿದ್ದರು. ಸಮುದಾಯದ ಮೌಲ್ವಿಗಳು ಮತ್ತು ವಸತಿ ಹಾಗೂ ವಕ್ಫ್ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಮುಖ್ಯಮಂತ್ರಿಯವರನ್ನು ಸಾಂಪ್ರದಾಯಿಕ ಮುಸ್ಲಿಂ ವಸ್ತ್ರವನ್ನು ಹೊದಿಸಿ ತಲೆಗೆ ಟೋಪಿ ತೊಡಿಸಿ ಗೌರವಿಸಿದರು. ಹಾರ-ತುರಾಯಿಗಳಿಂದ ಸನ್ಮಾನ ಬೇಡ ಎಂದು ಸಾರಿರುವ ಮುಖ್ಯಮಂತ್ರಿ ಇಲ್ಲೂ ತಮ್ಮ ಮಾತಿಗೆ ಬದ್ಧರಾಗಿದ್ದರು. ಶಾಲು ಮತ್ತು ಗಂಧದ ಹಾರವನ್ನು ಅವರು ನಯವಾಗಿ ತಿರಸ್ಕರಿಸಿದರು. ಹಾರ ಹಾಕಲು ಬಂದಿದ್ದ ವ್ಯಕ್ತಿಯನ್ನು ಜಮೀರ್ ಅಹ್ಮದ್ ಗದರುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos