Loading video

ಬಸನಗೌಡ ಯತ್ನಾಳ್ ಬಿಜೆಪಿ ಪರವಾಗಿ ಮಾತಾಡುವುದು ಬೇಕಿಲ್ಲ, ಅವರನ್ನು ಉಚ್ಚಾಟಿಸಲಾಗಿದೆ: ಕಾಶಪ್ಪನವರ್

Updated on: Apr 30, 2025 | 3:30 PM

ಕಾಶಪ್ಪನವರ್ ಮತ್ತು ಯತ್ನಾಳ್ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡುವಾಗ ಭಾಷೆಯ ಎಲ್ಲೆ ಮೀರುತ್ತಿರುವುದು ಉತ್ತರ ಕನ್ನಡಿಗರ ದೌರ್ಭಾಗ್ಯ. ತಮ್ಮ ಬಯ್ಗುಳಗಳ ನಡುವೆ ಇವರು ತಮ್ಮ ತಂದೆ-ತಾಯಿಗಳನ್ನು ತರುತ್ತಿದ್ದಾರೆ. ಜನಪ್ರತಿನಿಧಿಗಳಾಗಿರುವ ಇವರಿಂದ ಜನ ಇದನ್ನು ನಿರೀಕ್ಷಿಸಿರಲಿಲ್ಲ. ಮಾಧ್ಯಮಗಳಿಗೆ ಅವರು ನೀಡುವ ಹೇಳಿಕೆಗಳನ್ನು ಕುಟುಂಬಸ್ಥರು ಮನೆಯಲ್ಲಿ ಒಟ್ಟಿಗೆ ಕೂತು ಕೇಳಲು ಮತ್ತು ನೋಡಲಾಗಲ್ಲ.

ಬಾಗಲಕೋಟೆ, ಏಪ್ರಿಲ್ 30: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಲಕ್ಷಣಗಳಿಲ್ಲ. ಇಂದು ಬೆಳಗ್ಗೆ ಯತ್ನಾಳ್ ಆಡಿದ ಮಾತುಗಳಿಗೆ ಉತ್ತರ ನೀಡಿದ ಕಾಶಪ್ಪನವರ್, ತಾನು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಷಯದಲ್ಲಿ ಭೇಟಿಯಾಗಿದ್ದರೆ ಅವರು ಹೇಳಲಿ, ಯತ್ನಾಳ್ ಯಾಕೆ ಹೇಳುತ್ತಿದ್ದಾರೆ? ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದರು. 2ಡಿ ಮತ್ತು 2ಸಿ ಕೊಡಿಸಲು ಯತ್ನಾಳ್ ಡೀಲ್ ಮಾಡಿದ ವಿಷಯ ತನಗೆ ಗೊತ್ತಿದೆ, ಸಂದರ್ಭ ಬಂದಾಗ ಎಲ್ಲ ಹೇಳ್ತೀನಿ ಅಂತ ಕಾಶಪ್ಪನವರ್ ಹೇಳಿದರು.

ಇದನ್ನೂ ಓದಿ:  ವಿಜಯಾನಂದ ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ