ದೇವಾಲಯದಲ್ಲಿ ತೀರ್ಥ ಪ್ರೋಕ್ಷಣೆ ಮಾಡುವುದೇಕೆ? ಅದರ ಮಹತ್ವವೇನು?
ಮಂತ್ರಗಳನ್ನು ಜಪಿಸಿ ದೇವರ ವಿಗ್ರಹದ ಮೇಲೆ ನೀರು ಸುರಿದು ಅಭಿಷೇಕ ಮಾಡಲಾದ ನೀರನ್ನು ನಾವು ತೀರ್ಥ ರೂಪದಲ್ಲಿ ನೋಡುತ್ತೇವೆ. ಈ ತೀರ್ಥ ಪುಣ್ಯ ಪಾವಿತ್ರವಾದದ್ದು. ಇದನ್ನು ಸೇವಿಸುವುದರಿಂದ ಹಾಗೂ ಪ್ರೋಕ್ಷಣೆ ಮಾಡುವುದರಿಂದ ಅನೇಕ ಲಾಭಗಳಿವೆ. ಈ ಬಗ್ಗೆ ಬಸವರಾಜ ಗುರೂಜಿಯವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಹಿಂದೂ ದೇವಾಲಯಗಳಲ್ಲಿ ದೇವರಿಗೆ ಅಭಿಷೇಕ ಮಾಡಿದ ನೀರನ್ನು ತೀರ್ಥವಾಗಿ ಸೇವಿಸಲಾಗುತ್ತೆ. ಇನ್ನು ಮನೆಯ ಮಕ್ಕಳು ಭಯಪಟ್ಟಿಕೊಂಡಿದ್ದರೆ, ಅನಾರೋಗ್ಯದಿಂದ ಬಳಸುತ್ತಿದ್ದರೆ, ಹಠ ಮಾಡುತ್ತಿದ್ದರೆ, ಆ ಮಕ್ಕಳಿಗೆ ತಾಯತ ಕಟ್ಟಿಸಿ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತೆ. ಈ ರೀತಿ ಮಾಡುವುದರಿಂದ ಮಕ್ಕಳ ಮೇಲೆ ದೇವರ ಕೃಪೆ ಇರುತ್ತೆ. ಮಕ್ಕಳಿಗೆ ಎದುರಾದ ಸಮಸ್ಯೆ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.
ಶಿರಸ್ಸಿನ ಮೇಲೆ ತೀರ್ಥ ಪ್ರೋಕ್ಷಣೆ ಮಾಡುವುದಿಂದ ಸೂಪ್ತ ಮನಸ್ಸಯ ಜಾಗೃತವಾಗುತ್ತೆ. ನಮ್ಮ ಆಲೋಚನೆಗಳು ಬದಲಾಗುತ್ತವೆ. ದೋಷ ನಿವಾರಣೆಯಾಗಿ, ಕೆಟ್ಟ ಶಕ್ತಿಗಳು ದೂರಾಗುತ್ತವೆ. ಇನ್ನು ಮತ್ತಷ್ಟು ಲಾಭಗಳ ಬಗ್ಗೆ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ