ಸಿದ್ದರಾಮಯ್ಯಗೆ ನೀಡಿದ ಮನವಿ ಪತ್ರಗಳು ಕಸದ ಬುಟ್ಟಿಯಲ್ಲಿ! ಕ್ಷಮೆ ಕೇಳದಿದ್ದರೆ ಪರಿಣಾಮ ಗಂಭೀರ ಎಂದ ರೈತರು!
ಮನುಷ್ಯನಿಗೆ ಅಹಂಕಾರ ಇರಬೇಕು ಆದರೆ ದುರಹಂಕಾರ ಇರಬಾರದು ಎಂದು ರೈತ ಮುಖಂಡ ಹೇಳುತ್ತಾರೆ. ವೇದಿಕೆಯ ಮೇಲೆ ರೈತರು, ದಲಿತರು, ಶೋಷಿತರ ಹಿತರಕ್ಷಣೆ ಮತ್ತು ಕಲ್ಯಾಣದ ಬಗ್ಗೆ ದೊಡ್ಡದಾಗಿ ಭಾಷಣಗಳನನ್ನು ಮಾಡುತ್ತ ತಾನು ಹಿಂದುಳಿದವರ ಉದ್ಧಾರಕ ಎಂದು ಪೋಸು ಬಿಗಿಯುವ ಸಿದ್ದರಾಮಯ್ಯರಿಂದ ಇಂಥ ಬೇಜವಾಬ್ದಾರಿ ವರ್ತನೆಯನ್ನು ಕನ್ನಡಿಗರು ನಿರೀಕ್ಷಿಸಿರಲಿಲ್ಲ.
ಚಾಮರಾಜನಗರ: ಜಿಲ್ಲೆಯ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳುತ್ತಿದ್ದಾರೆ. ಅವರ ಕೋಪ, ಬೇಸರ ಮತ್ತು ಹೇವರಿಕೆಗೆ ಕಾರಣವೂ ಇದೆ ಮತ್ತು ಸಮರ್ಥನೆಯೂ ಇದೆ. ರಾಜ್ಯದ ಮುಖ್ಯಮಂತ್ರಿಯಿಂದ ರೈತರು ಇಂಥ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಮೊನ್ನೆ 10 ನೇ ತಾರೀಖು ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸುನೀಲ್ ಬೋಸ್ ಸಂಸತ್ತಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕೃತಜ್ಞತಾ ಸಮಾರಂಭ ಏರ್ಪಡಿಸಲಾಗಿತ್ತು ಮತ್ತು ಅದರಲ್ಲಿ ಸಿದ್ದರಾಮಯ್ಯ ಮತ್ತು ಬೇರೆ ಕೆಲ ಸಚಿವರು ಭಾಗಿಯಾಗಿಸದ್ದರು. ಆ ಸಂದರ್ಭದಲ್ಲಿ ಜಲ್ಲೆಯ ರೈತರು ತಾವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗೆ ಒಂದು ಮನವಿ ಪತ್ರ ಸಲ್ಲಿಸಿದ್ದಾರೆ. ಅದರ ಜೊತೆಗೆ ಬೇರೆ ಮನವಿಗಳನ್ನು ಸಿಎಂಗೆ ಸಲ್ಲಿಸಲಾಗಿದೆ. ಆದರೆ ಮರುದಿ ಬೆಳಗ್ಗೆ ಆ ಪತ್ರಗಳೆಲ್ಲ ಕಸದ ಬುಟ್ಟಿಗಳಲ್ಲಿ ಪತ್ತೆಯಾಗಿವೆ! ಮುಖ್ಯಮಂತ್ರಿಯ ಈ ಉಡಾಫೆ ಧೋರಣೆ ಮತ್ತು ಹೊಣೆಗೇಡಿ ವರ್ತನೆ ಸಹಜವಾಗೇ ರೈತರನ್ನು ಇನ್ನಿಲ್ಲದಂತೆ ಕೆರಳಿಸಿದೆ. ಸಿದ್ದರಾಮಯ್ಯ ರೈತರ ಕ್ಷಮೆ ಕೇಳದಿದ್ದರೆ ಅವರನ್ನು ಯಾವತ್ತೂ ಚಾಮರಾಜನಗರಕ್ಕೆ ಬರಲು ಬಿಡಲ್ಲ ಮತ್ತು ಬಂದರೂ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ರೈತ ಮುಖಂಡರೊಬ್ಬರು ಎಚ್ಚರಿಸಿದ್ದಾರೆ.
ಸಿಎಂ ನವಾಬರೂ ಅಲ್ಲ ಸುಲ್ತಾನರೂ ಅಲ್ಲ: ಅಶೋಕ
ಏತನ್ಮಧ್ಯೆ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುರ್ವರ್ತನೆಗೆ ತೀಕ್ಷ್ಣ ಮತ್ತು ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ X ಹ್ಯಾಂಡಲ್ ನಲ್ಲಿ ಅವರು; ಮುಖ್ಯಮಂತ್ರಿಯವರಿಗೆ ಹತ್ತಿದ ಏಣಿಯನ್ನು ಒದೆಯುಷ್ಟು ಮದವೇರಿದೆ, ತಮ್ಮ ಸಂಕಷ್ಟಗಳ ಪರಿಹಾರಿ ಕೋರಿ ಜನ ಮನವಿ ಪತ್ರ ಸಲ್ಲಿಸಿದರೆ ಅವುಗಳನ್ನು ಕಸದ ಬುಟ್ಟಿಗೆ ಎಸೆಯುವ ದಾರ್ಷ್ಟ್ಯತೆ ಪ್ರದರ್ಶಿಸಿದ್ದಾರೆ ಎಂದಿದ್ದಾರೆ. ಅಧಿಕಾರದ ಮದ ಸಿದ್ದರಾಮಯ್ಯನವರ ರಾಜಕೀಯ ಬದುಕಿಗೆ ಇತಿಶ್ರೀ ಹಾಡಲಿದೆ ಎಂದು ಅಶೋಕ ಹೇಳಿದ್ದಾರೆ.
ಹತ್ತಿದ ಏಣಿಯನ್ನೇ ಒದೆಯುವಷ್ಟು ಅಧಿಕಾರದ ಮದವೇರಿದೆಯೇ ಸಿಎಂ @siddaramaiah ನವರೇ?
ಅಧಿಕಾರದ ಮದವೇರಿದ @INCKarnataka ಪಕ್ಷಕ್ಕೆ ಮತದಾರರು use and throw ವಸ್ತುಗಳೇ ಹೊರತು ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದಕ್ಕೆ ಚಾಮರಾಜನಗರದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ.
ಸಿಎಂ @siddaramaiah ನವರೇ, ಜನರು ತಮ್ಮ… pic.twitter.com/AFgqV1ovNk
— R. Ashoka (ಮೋದಿ ಅವರ ಕುಟುಂಬ) (@RAshokaBJP) July 13, 2024
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ನೀವೇ ಅರೆಸ್ಟ್ ಆಗಬಹುದು, ಸಿದ್ದರಾಮಯ್ಯ ಬಗ್ಗೆ ಜೋಶಿ ಅಚ್ಚರಿ ಹೇಳಿಕೆ