ಅನಂತ್-ರಾಧಿಕಾ ಮದುವೆಯಲ್ಲಿ ಬಾಲಿವುಡ್​ ನಟಿಯರ ದಂಡು

ಅನಂತ್-ರಾಧಿಕಾ ಮದುವೆಯಲ್ಲಿ ಬಾಲಿವುಡ್​ ನಟಿಯರ ದಂಡು

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 13, 2024 | 8:22 AM

ರಿಲೈನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ಉದ್ಯಮಿಯ ಮಗಳು ರಾಧಿಕಾ ಮರ್ಚೆಂಟ್ ಮದುವೆ ಅದ್ದೂರಿಯಾಗಿ ಮುಂಬೈನಲ್ಲಿ ನೆರವೇರಿದೆ. ಐಶ್ವರ್ಯಾ ರೈ-ಆರಾಧ್ಯಾ, ಜಾನ್ವಿ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್, ರೇಖಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮದುವೆಯಲ್ಲಿ ಹಾಜರಿ ಹಾಕಿ ಗಮನ ಸೆಳೆದಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮದುವೆ ಅದ್ದೂರಿಯಾಗಿ ನೆರವೇರಿದೆ. ದೇಶ-ವಿದೇಶದಿಂದ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದಾರೆ. ಇಡೀ ಬಾಲಿವುಡ್​ ಈ ಮದುವೆಯಲ್ಲಿ ಹಾಜರಿ ಹಾಕಿತ್ತು. ನಟಿಯರು ಈ ಮದುವೆಯಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ. ಐಶ್ವರ್ಯಾ ರೈ-ಆರಾಧ್ಯಾ, ಜಾನ್ವಿ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್, ರೇಖಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮದುವೆಯಲ್ಲಿ ಹಾಜರಿ ಹಾಕಿ ಗಮನ ಸೆಳೆದಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಅವರ ಕೊನೆಯ ಮಗ ಅನಂತ್. ಈ ಕಾರಣದಿಂದಲೇ ಸಾಕಷ್ಟು ಅದ್ದೂರಿಯಾಗಿ ವಿವಾಹ ಕಾರ್ಯಗಳು ನೆರವೇರಿವೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಈ ಮದುವೆಯಲ್ಲಿ ಭಾಗಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ