AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳು ಸಿತಾರಾ, ಪತ್ನಿ ನಮ್ರತಾ ಜತೆ ಬಂದು ಅನಂತ್ ಅಂಬಾನಿ ಮದುವೆಗೆ ಸಾಕ್ಷಿಯಾದ ಮಹೇಶ್ ಬಾಬು

ಮಗಳು ಸಿತಾರಾ, ಪತ್ನಿ ನಮ್ರತಾ ಜತೆ ಬಂದು ಅನಂತ್ ಅಂಬಾನಿ ಮದುವೆಗೆ ಸಾಕ್ಷಿಯಾದ ಮಹೇಶ್ ಬಾಬು

ಮದನ್​ ಕುಮಾರ್​
|

Updated on: Jul 12, 2024 | 10:45 PM

Share

ನಟ ಮಹೇಶ್​ ಬಾಬು ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಮದುವೆಗೆ ಮಹೇಶ್​ ಬಾಬುಗೂ ಆಹ್ವಾನ ಬಂದಿದೆ. ಹಾಗಾಗಿ ಅವರು ಕುಟುಂಬ ಸಮೇತರಾಗಿ ಈ ವಿವಾಹಕ್ಕೆ ಹಾಜರಿ ಹಾಕಿದ್ದಾರೆ. ಕ್ರೀಡೆ, ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ವಿವಿಐಪಿಗಳು ಅನಂತ್​ ಅಂಬಾನಿಯ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ಭಾರಿ ವೈಭವದಿಂದ ಅನಂತ್​ ಅಂಬಾನಿಯ ಮದುವೆ ನಡೆಯುತ್ತಿದೆ. ರಾಧಿಕಾ ಮರ್ಚೆಂಟ್​ ಜೊತೆ ಅನಂತ್​ ಅಂಬಾನಿ ಅವರು ದಾಂಪತ್ಯ ಜೀವನ ಆರಂಭಿಸುತ್ತಿದ್ದಾರೆ. ಇಂದು (ಜುಲೈ 12) ಮುಂಬೈನಲ್ಲಿ ಗ್ರ್ಯಾಂಡ್​ ಆಗಿ ಮದುವೆ ಜರುಗುತ್ತಿದೆ. ಬಾಲಿವುಡ್​, ಕಾಲಿವುಡ್​, ಟಾಲಿವುಡ್​ನ ಟಾಪ್​ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿ ಆಗುತ್ತಿದ್ದಾರೆ. ಟಾಲಿವುಡ್​ನ ‘ಪ್ರಿನ್ಸ್​’ ಮಹೇಶ್​ ಬಾಬು ಅವರು ಪತ್ನಿ ನಮ್ರತಾ ಶಿರೋಡ್ಕರ್​ ಹಾಗೂ ಪುತ್ರಿ ಸಿತಾರಾ ಘಟ್ಟಮನೇನಿ ಜೊತೆ ಬಂದು ಅಂಬಾನಿ ಕುಟುಂಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಉದ್ಯಮಿ ಮುಕೇಶ್​ ಅಂಬಾನಿ ಅವರು ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದ್ದಾರೆ. ಹಲವು ದೇಶಗಳಿಂದ ಅತಿಥಿಗಳು ಬಂದಿದ್ದಾರೆ. ಇವರೆಲ್ಲರಿಂದಾಗಿ ಮದುವೆ ಮನೆಯ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ. ರಜನಿಕಾಂತ್​, ಶಾರುಖ್​ ಖಾನ್​, ಸಲ್ಮಾನ್​ ಖಾನ್ ಅವರಂತಹ ಸೂಪರ್​ ಸ್ಟಾರ್​ಗಳು ಮದುವೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More