ಡಿನೋಟಿಫಿಕೇಷನ್ ಪ್ರಕರಣದಲ್ಲಿ ಈಡಿ ಕುಮಾರಸ್ವಾಮಿಗೆ ಯಾಕೆ ನೋಟೀಸ್ ನೀಡಿಲ್ಲ? ಸಂತೋಷ್ ಲಾಡ್
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷದ ಕಡೆ ವಾಲುವ ಸಾಧ್ಯತೆ ಇದೆ, ಅವರ ಪಕ್ಷದಲ್ಲಿ ಸ್ವಾಗತವಿದೆಯಾ ಎಂದು ಕೇಳಿದ್ದಕ್ಕೆ ಸಂತೋಷ್ ಲಾಡ್, ಅದರ ಬಗ್ಗೆ ತನಗೆ ಮಾಹಿತಿ ಇಲ್ಲ, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಎಂದು ಪ್ರಶ್ನಿಸಿದರು. ಮುಡಾ ಪ್ರಕರಣದಲ್ಲಿ ಈಡಿ ಸಿದ್ದರಾಮಮಯ್ಯನವರಿಗೆ ನೋಟೀಸ್ ನೀಡಿದ ಹಿಂದಿನ ಲಾಜಿಕ್ ಅರ್ಥವಾಗಲಿಲ್ಲ. ಈಡಿ ಸಿಎಂಗೆ ನೋಟೀಸ್ ನೀಡಬಹುದಾದರೆ ಜಮೀನು ಡಿನೋಟಿಫೈ ಮಾಡಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಈಡಿ ಇದುವರೆಗೆ ಯಾಕೆ ನೋಟೀಸ್ ನೀಡಿಲ್ಲ ಎಂದು ಲಾಡ್ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿಯಲ್ಲಿ ಮದ್ಯ ಪ್ರಿಯರ ಪ್ರತಿಭಟನೆ, ಬೇಡಿಕೆಗಳನ್ನು ಕೇಳಿ ಸಚಿವ ಸಂತೋಷ್ ಲಾಡ್ ಶಾಕ್!
Loading...
Unable to load recommendations.
Follow Us