ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ? ಸಿಕ್ಕಿತು ಉತ್ತರ

|

Updated on: Oct 08, 2024 | 10:23 AM

‘ಬಿಗ್ ಬಾಸ್’ ಅನ್ನೋದು ಬೇರೆಯದೇ ಲೋಕ. ಇಲ್ಲಿ ಹೊರಗಿನ ವಿಚಾರಗಳನ್ನು ಎಳೆದು ತರಬಾರದು. ಈಗ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ವಿಚಾರ ಏಕೆ ಚರ್ಚೆಗೆ ಬಂದಿಲ್ಲ ಎಂಬುದಕ್ಕ ಉತ್ತರ ಸಿಕ್ಕಿದೆ. ಯಮುನಾ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆರಂಭ ಆಗಿದ್ದು ನಟಿ ಯಮುನಾ ಶ್ರೀನಿಧಿ ಮೊದಲ ವಾರವರೇ ಎಲಿಮಿನೇಟ್ ಆಗಿದ್ದಾರೆ. ಅವರು ಹೊರ ಬಂದ ಬಳಿಕ ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಅವರು ದರ್ಶನ್ ಅಭಿಮಾನಿ. ಬಿಗ್ ಬಾಸ್ ಸೇರಿದವರಲ್ಲಿ ಇನ್ನೂ  ಕೆಲ ದರ್ಶನ್ ಫ್ಯಾನ್ಸ್ ಇದ್ದಾರೆ. ಆದರೆ, ಯಾರೊಬ್ಬರೂ ದರ್ಶನ್ ವಿಚಾರ ಮಾತನಾಡಲಿಲ್ಲ. ಹೀಗೇಕೆ ಎನ್ನುವ ಪ್ರಶ್ನೆಗೆ ಯಮುನಾ ಶ್ರೀನಿಧಿ ಅವರು ಉತ್ತರಿಸಿದ್ದಾರೆ. ‘ಹೊರಗಿನ ಯಾವ ವಿಚಾರಗಳನ್ನು ನಾವು ಒಳಗೆ ಮಾತನಾಡುವಂತೆ ಇರಲಿಲ್ಲ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.