Protest Enters Second Day: ನಮ್ಮ ಸರ್ಕಾರಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಅಂದರೆ ಕಡೆಗಣಿಸಲ್ಪಟ್ಟ ಸಮುದಾಯವೇ?

|

Updated on: Jan 25, 2023 | 8:52 AM

ಬೆಂಗಳೂರಿನ ಕೊರೆಯುವ ಚಳಿಯಲ್ಲಿ ಈ ತಾಯಂದಿರು ಪುನಃ ಅಹೋರಾತ್ರಿ ಪ್ರತಿಭಟನೆಗೆ ಕೂತಿದ್ದಾರೆ, ಇವತ್ತು ಎರಡನೇ ದಿನ,

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ (Anganwadi Workers) ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಯಾವುದೇ ಪಕ್ಷದ ನೇತೃತ್ವದಲ್ಲಿ ಅಧಿಕಾರದಲ್ಲಿರಲಿ, ಈ ಕಡೆಗಣಿಸಲ್ಪಟ್ಟ ಕಾರ್ಯಕರ್ತೆಯರ ಬೇಡಿಕೆಗಳನ್ನು (demands) ಈಡೇರಿಸಲು ಅದೇನು ತಾಪತ್ರಯವೋ? ಅವರು ತಮ್ಮ ಬೇಡಿಕೆಗಳನ್ನು ಮನ್ನಣೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆಗೆ ಆಂತ ಬೆಂಗಳೂರಿಗೆ (Bengaluru) ಬಂದಾಗಲೆಲ್ಲ ಸಂಬಂಧಪಟ್ಟ ಸಚಿವ ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡಿ ವಾಪಸ್ಸು ಕಳಿಸುತ್ತಾರೆ, ಅಷ್ಟೇ. ಅವರು ವಾಪಸ್ಸು ಹೋದ ಬಳಿಕ ಭರವಸೆ ನೀಡಿದ ಸಚಿವ ಅದನ್ನು ಮರೆತುಬಿಡುತ್ತಾರೆ. ಇಲ್ನೋಡಿ, ಬೆಂಗಳೂರಿನ ಕೊರೆಯುವ ಚಳಿಯಲ್ಲಿ ಈ ತಾಯಂದಿರು ಪುನಃ ಅಹೋರಾತ್ರಿ ಪ್ರತಿಭಟನೆಗೆ ಕೂತಿದ್ದಾರೆ. ಇವತ್ತು ಎರಡನೇ ದಿನ, ಸರ್ಕಾರದ ಪ್ರತಿನಿಧಿ ನಿನ್ನೆಯೇ ಅವರು ಮುಷ್ಕರ ನಡೆಸುವಲ್ಲಿಗೆ ಬಂದು ಲಿಖಿತ ರೂಪದಲ್ಲಿ ಬೇಡಿಕೆಗಳನ್ನು ಈಡೇರಿಸುವ ಪತ್ರ ನೀಡಿದ್ದರೆ ಆಗುತ್ತಿರಲಿಲ್ಲವೇ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 25, 2023 08:49 AM