ಹಾಸನ: ಜೆಡಿಎಸ್ ಪಕ್ಷದ ಅರಸೀಕೆರೆ ಕೆ ಎಮ್ ಶಿವಲಿಂಗೇಗೌಡ (K M Shivalingegowda) ನೇರ ಮಾತಿನ ಶಿಸ್ತಿನ ಮತ್ತು ಪ್ರಾಮಾಣಿಕ ರಾಜಕಾರಣಿ ಅಂತಲೇ ಹೆಸರಾಗಿದ್ದಾರೆ. ಆದರೆ, ಅವರು ಜೆಡಿಎಸ್ ಪಕ್ಷದ ಕಾರ್ಯಕರ್ತನೊಬ್ಬನಿಗೆ (party worker) ರೂ 50,000 ಕೊಟ್ಟಿದ್ದು ಮತ್ತು ಅ ಕಾರ್ಯಕರ್ತರ ಶಾಸಕರೊಂದಿಗೆ ಫೋನಲ್ಲಿ ನಡೆಸಿದ ಆಡಿಯೋವೊಂದು (audio) ಇತ್ತೀಚಿಗೆ ವೈರಲ್ ಆಗಿದೆ. ಅರಸೀಕೆರೆ ತಾಲ್ಲೂಕು ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿನ ಲಾಳನಕೆರೆ ಗ್ರಾಮ ಪಂಚಾಯಿತಿಗೆ ನೂತನ ಆಧ್ಯಕ್ಷ ಮತ್ತು ಉಪಾಧ್ಯಾಕ್ಷರನ್ನು ಆಯ್ಕೆ ಮಾಡಿದ ಬಳಿಕ ಈ ವೈರಲ್ ಆಡಿಯೋ ಕ್ಲಿಪ್ಪಿಂಗ್ ಬಗ್ಗೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕರ್ತ ತಮ್ಮ ತೋಟದಲ್ಲಿ ಮೂರು ದಿನ ಕೂತು ತುಂಬಾ ಕಷ್ಟದಲ್ಲಿದ್ದೇನೆ ಅಂತ ಅವಲತ್ತುಕೊಂಡ ಕಾರಣಕ್ಕೆ ಅವನಿಗೆ ರೂ. 50,000 ನೀಡಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ