ಸೂಕ್ಷ್ಮ ಸಂಗತಿಗಳ ಬಗ್ಗೆ ಹಗುರವಾಗಿ ಮಾತಾಡುವುದು ನಂತರ ಅದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾದಾಗ ಬಹಿರಂಗವಾಗು ಕ್ಷಮೆಯಾಚಿಸುವುದು ನಮ್ಮ ರಾಜಕಾರಣಿಗಳಿಗೆ ಹೊಸದೇನೂ ಅಲ್ಲ ಮಾರಾಯ್ರೇ. ಶೃಂಗೇರಿ ಶಾಸಕ ಟಿಡಿ ರಾಜೇಗೌಡ (TD Rajegowda) ಅವರು ಅಯೋಧ್ಯೆ (Ayodhya) ಮತ್ತು ದತ್ತಪೀಠ (Dattapeetha) ಹೋರಾಟದ ಬಗ್ಗೆ ಆಡಿದ ಮಾತುಗಳು ವಿವಾದವನ್ನು ಸೃಷ್ಟಿಸಿದ್ದು ನಿಮಗೆ ಗೊತ್ತಿದೆ. ಅವರ ಹೇಳಿಕೆ ವಿರುದ್ಧ ಅಕ್ರೋಷ ವ್ಯಕ್ತಪಡಿಸಿದ್ದ ಹಿಂದೂ ಸಂಘಟನೆಗಳು ಶಾಸಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದವು. ಶಿರಡಿ ಸಾಯಿಬಾಬಾರ ದರ್ಶನ ಪಡೆಯಲು ಕುಂಟುಂಬಸಮೇತ ಹೋಗಿರುವ ಶಾಸಕರು ಅಲ್ಲಿಂದಲೇ ಒಂದು ವಿಡಿಯೋವನ್ನು ಬಿಡುಗಡೆ ಮಾಡಿ ತಮ್ಮ ಹೇಳಿಕೆಗಳಿಗೆ ಕ್ಷಮೆ ಯಾಚಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ