ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್

Updated on: Jun 24, 2025 | 10:33 AM

ರವಿಚಂದ್ರನ್ ಹಾಗೂ ಹಂಸಲೇಖ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಜೋಡಿ. ಆದರೆ, ಒಂದು ಹಂತದಲ್ಲಿ ಇವರು ಬೇರೆ ಆದರು. ಈಗ ರವಿಚಂದ್ರನ್ ಅವರು ಒಂದು ದೊಡ್ಡ ವಿಚಾರ ರಿವೀಲ್ ಮಾಡಿದ್ದಾರೆ. ತಾವು ಹಂಸಲೇಖ ಅವರಿಂದ ದೂರ ಆಗಿದ್ದೇಕೆ ಎಂಬುದನ್ನು ಹೇಳಿದ್ದಾರೆ.

ಹಂಸಲೇಖ ಹಾಗೂ ರವಿಚಂದ್ರನ್ (Ravichandran) ಅವರದ್ದು ಹಿಟ್ ಕಾಂಬಿನೇಷನ್. ಆದರೆ, ಒಂದು ಹಂತದಲ್ಲಿ ಇಬ್ಬರೂ ದೂರ ಆದರು. ಇದಕ್ಕೆ ಕಾರಣ ಏನು ಎಂಬುದನ್ನು ರವಿಚಂದ್ರನ್ ವಿವರಿಸಿದರು. ಹಂಸಲೇಖ ಅವರ ನಿರ್ದೇಶನದ ‘ಓಕೆ’ ಸಿನಿಮಾದ ಲಾಂಚ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಮಾತನಾಡಿದರು. ‘ನಾನು ಹಾಗೂ ಹಂಸಲೇಖ ದೂರು ಆಗಲು ಕಾರಣ ಏನು ಎಂಬುದು ನಮಗೂ ಗೊತ್ತಿಲ್ಲ. ನಾನು ಮತ್ತು ಹಂಸಲೇಖ ಈವರೆಗೆ ಜಗಳ ಆಡಿಲ್ಲ. ಯಾವುದೂ ಬಿಟ್ಟು ಹೋಗುವ ಕಾರಣ ಆಗಿರಲಿಲ್ಲ. ಡೆಸ್ಟಿನಿ ಹೇಗೆ ಒಂದು ಮಾಡುತ್ತದೆಯೋ ಹಾಗೆಯೇ ದೂರ ಮಾಡುತ್ತದೆ. ಇದಕ್ಕೆಲ್ಲ ಒಂದಷ್ಟು ಕಾರಣ ಇರಬಹುದು. ನಾನೇ ಹಾಡು ಬರೆಯಬೇಕು ಎಂಬುದಿತ್ತೇನೋ. ಅದಕ್ಕೆ ಈ ರೀತಿ ಆಗಿರಬಹುದು. ಈಗ ಅವರು ನನ್ನ ಡಿಪಾರ್ಟ್​ಮೆಂಟ್​​ಗೆ (ನಿರ್ದೇಶನ) ಬಂದಿದ್ದಾರೆ’ ಎಂದರು ರವಿಚಂದ್ರನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.