ಒಬ್ಬ ಚಿಂದಿ ಚೋರ್​ನನ್ನು ಮಾಧ್ಯಮದವರು ಹುಲಿ ಅಂತ ಪ್ರೊಜೆಕ್ಟ್ ಮಾಡಿದರೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು? ಬಸನಗೌಡ ಪಾಟೀಲ್ ಯತ್ನಾಳ್

|

Updated on: Nov 17, 2023 | 6:19 PM

ಯಾವನೋ ಚಿಂದಿ ಚೋರ್ ನನ್ನು ಅಧ್ಯಕ್ಷನೋ ಮತ್ತೊಂದೋ ಮಾಡಿ ಅವನನ್ನು ಮಾಧ್ಯಮದವರು ಆ ಹುಲಿ ಈ ಹುಲಿ ಅಂತ ಪ್ರೊಜೆಕ್ಟ್ ಮಾಡಿದರೆ ತಾನ್ಯಾಕೆ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಹೇಳುತ್ತಾರೆ. ಪಕ್ಷದ ರಾಜ್ಯಾಧ್ಯಕ್ಷನ ಬಗ್ಗೆ ಕೀಳಾಗಿ ಮಾತಾಡಿದರೆ ಹೈಕಮಾಂಡ್ ಶಿಸ್ತುಕ್ರಮ ತೆಗೆದುಕೊಳ್ಳಬಹುದೆಂಬ ಹೆದರಿಕೆ ಕೂಡ ಇಲ್ಲದಷ್ಟು ತಾತ್ಸಾರ, ಹೇವರಿಕೆ, ಜಿಗುಪ್ಸೆಯನ್ನು ಯತ್ನಾಳ್ ಮನಸಲ್ಲಿ ಇಟ್ಟುಕೊಂಡಿದ್ದಾರೆಯೇ?

ಬೆಂಗಳೂರು: ಚಿಂದಿ ಚೋರ್ ಅನ್ನೋದು ಮುಂಬೈ-ಕರ್ನಾಟಕ ಪ್ರಾಂತ್ಯದಲ್ಲಿ (Mumbai Karnataka region) ಕೀಳು ಬೈಗುಳವಾಗಿ ಬಳಸುವ ಪದ. ವ್ಯಕ್ತಿಯೊಬ್ಬ ಕೀಳು ದರ್ಜೆಯವ, ಚಿಂದಿ ಬಟ್ಟೆಗಳನ್ನೂ ಕಳುವು ಮಾಡಲು ಸಹ ಹೇಸದ ವ್ಯಕ್ತಿಯನ್ನು ಚಿಂದಿ ಚೋರ್ (Chindi Chor) ಅನ್ನುತ್ತಾರೆ. ಬಿವೈ ವಿಜಯೇಂದ್ರ ಬಿಜೆಪಿ ರಾಜಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ನಡೆದ ಪದಗ್ರಹಣ ಸಮಾರಂಭದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ ಅಂತ ಪತ್ರಕರ್ತರು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ಕೇಳಿದಾಗ, ಕೂಡಲೇ ಸಿಡುಕಿದ ಅವರು, ನಿಮಗ್ಯಾಕೆ ಅಷ್ಟು ಕಾಳಜಿ, ಇಂಥ ಪ್ರಶ್ನೆಗಳನ್ನು ಮಾಧ್ಯಮದವರು ಕೇಳಬಾರದು ಅನ್ನುತ್ತಾರೆ. ಮಾಧ್ಯಮ ಯಾವುದಾದರೂ ಪಕ್ಷ ಅಥವಾ ವ್ಯಕ್ತಿಯನ್ನು ವಹಿಸಿಕೊಂಡು ಮಾತಾಡಬಾರದು, ವರದಿಗಾರಿಕೆ ನಿಷ್ಪಕ್ಷವಾಗಿರಬೇಕು ಎಂದು ಹೇಳಿದ ಬಳಿಕ ಅವರು ಚಿಂದಿ ಚೋರ್ ಪದವನ್ನು ಬಳಸುತ್ತಾರೆ. ಯಾವನೋ ಚಿಂದಿ ಚೋರ್ ನನ್ನು ಅಧ್ಯಕ್ಷನೋ ಮತ್ತೊಂದೋ ಮಾಡಿ ಅವನನ್ನು ಮಾಧ್ಯಮದವರು ಆ ಹುಲಿ ಈ ಹುಲಿ ಅಂತ ಪ್ರೊಜೆಕ್ಟ್ ಮಾಡಿದರೆ ತಾನ್ಯಾಕೆ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಹೇಳುತ್ತಾರೆ. ಪಕ್ಷದ ರಾಜ್ಯಾಧ್ಯಕ್ಷನ ಬಗ್ಗೆ ಕೀಳಾಗಿ ಮಾತಾಡಿದರೆ ಹೈಕಮಾಂಡ್ ಶಿಸ್ತುಕ್ರಮ ತೆಗೆದುಕೊಳ್ಳಬಹುದೆಂಬ ಹೆದರಿಕೆ ಕೂಡ ಇಲ್ಲದಷ್ಟು ತಾತ್ಸಾರ, ಹೇವರಿಕೆ, ಜಿಗುಪ್ಸೆಯನ್ನು ಯತ್ನಾಳ್ ಮನಸಲ್ಲಿ ಇಟ್ಟುಕೊಂಡಿದ್ದಾರೆಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on