ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ ಕಾಡಾನೆಯನ್ನು ಹೆದರಿಸಲು ಸೀಳುನಾಯಿಗಳ ವಿಫಲ ಪ್ರಯತ್ನ!
ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ ಕಾಡುನಾಯಿಗಳ ಗುಂಪೊಂದು ಕಾಡಾನೆಯನ್ನು ಹೆದರಿಸಲು ಮಾಡಿದ ಪ್ರಯತ್ನ ಸಫಾರಿಗೆ ತೆರಳಿದ್ದ ಜನರ ಮೊಬೈಲ್ ಪೋನಲ್ಲಿ ಸೆರೆಯಾಗಿದೆ.
ಮೈಸೂರು: ದೈತ್ಯ ಪ್ರಾಣಿ ಆನೆಯನ್ನು ಕಾಡುನಾಯಿಗಳು (wild dogs) ಅಟ್ಟಾಡಿಸಬಲ್ಲವೇ? ನಮ್ಮ ಪೂರ್ವಜರು ಹೇಳಿರುವ ಹಾಗೆ ಸೀಳುನಾಯಿಗಳು ಅಂತಲೂ ಕರೆಸಿಕೊಳ್ಳುವ ಈ ಕಾಡುಪ್ರಾಣಿಗಳ ಗುಂಪು ಹುಲಿಯನ್ನು ಸಹ ಹೆದರಿಸುತ್ತವಂತೆ. ಆದರೆ ಹೆಚ್ ಡಿ ಕೋಟೆಯ ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ (Wildlife Sanctuary) ಕಾಡುನಾಯಿಗಳ ಗುಂಪೊಂದು ಕಾಡಾನೆಯನ್ನು (wild elephant) ಹೆದರಿಸಲು ಮಾಡಿದ ಪ್ರಯತ್ನ ಸಫಾರಿಗೆ ತೆರಳಿದ್ದ ಜನರ ಮೊಬೈಲ್ ಪೋನಲ್ಲಿ ಸೆರೆಯಾಗಿದೆ. ಕಿರಿಕಿರಿ ತಾಳಲಾಗದೆ ಆನೆ ತಿರುಗಿಬಿದ್ದಾಗ ನಾಯಿಗಳು ದಿಕ್ಕಾಪಾಲಾಗಿ ಓಡುತ್ತವೆ.