ಕಾರ್ಕಳ – ಶೃಂಗೇರಿ ಹೆದ್ದಾರಿ ಬದಿಯಲ್ಲೇ ಕಾಡಾನೆ ಸಂಚಾರ: ವಾಹನ ಸವಾರರಲ್ಲಿ ಅತಂಕ
ಕಾರ್ಕಳ - ಶೃಂಗೇರಿ ಮಧ್ಯೆ ಸಂಚರಿಸುವ ವಾಹನ ಸವಾರರಲ್ಲಿ ಒಂಟಿ ಸಲಗವೊಂದು ಆತಂಕ ಸೃಷ್ಟಿಸಿದೆ. ಕಾಡಾನೆಯು ಕಳೆದ ಕೆಲವು ದಿನಗಳಿಂದ ಕುದುರೆಮುಖ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಓಡಾಡುತ್ತಿದೆ. ಸದ್ಯ ಗಂಗಾಮೂಲ ಪ್ರದೇಶದ ಕುರಿಂಜಾಲು ಮತ್ತು ಗಂಗಡಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ವಿಡಿಯೋ ಇಲ್ಲಿದೆ.
ಚಿಕ್ಕಮಗಳೂರು, ಡಿಸೆಂಬರ್ 2: ಚಿಕ್ಕಮಗಳೂರಿನ ಕಳಸ ತಾಲೂಕಿನ ಗಂಗಾಮೂಲ ಪ್ರದೇಶದಲ್ಲಿರುವ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಸಂಚಾರ ಕಾಣಿಸಿಕೊಂಡಿದೆ. ರಸ್ತೆಯ ಪಕ್ಕದಲ್ಲೇ ದೈತ್ಯ ಒಂಟಿ ಸಲಗ ಅಡ್ಡಾಡುತ್ತಿದ್ದು, ಕಾರ್ಕಳ–ಶೃಂಗೇರಿ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕುರಿಂಜಾಲು ಮತ್ತು ಗಂಗಡಿಕಲ್ಲು ಚಾರಣಕ್ಕೆ ಅರಣ್ಯ ಇಲಾಖೆ ತಾತ್ಕಾಲಿಕ ನಿಷೇಧ ಹೇರಿದೆ.