ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

Edited By:

Updated on: Mar 31, 2026 | 5:39 PM

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೊಗ್ಗೆದೊಡ್ಡಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಕೂಗಾಟಕ್ಕೆ ಹೆದರಿ ಆನೆಗಳ ಹಿಂಡು ವಾಪಸ್ ತೆರಳಿವೆ. ಇವು ಸಂಗಮ ವನ್ಯಜೀವಿಧಾಮದಿಂದ ಬಂದಿವೆ ಎಂದು ಅಂದಾಜಿಸಲಾಗಿದೆ.

ರಾಮನಗರ, ಮಾರ್ಚ್​​ 31: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೆಲ ಭಾಗಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಕೊಗ್ಗೆದೊಡ್ಡಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಏಕಾ ಏಕಿ ಗ್ರಾಮದತ್ತ ಬಂದ ಗಜಪಡೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಆನೆಗಳನ್ನು ಕಂಡು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಿರುಚಿದ್ದು, ಕೂಗಾಟ ಕೇಳಿ ಗಜಪಡೆ ಸ್ಥಳದಿಂದ ಕಾಲ್ಕಿತ್ತಿವೆ. ಇವು ಸಂಗಮ‌ ವನ್ಯಜೀವಿಧಾಮದಿಂದ ಬಂದಿರೋ ಆನೆಗಳು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Mar 31, 2026 05:39 PM
Loading...
Unable to load recommendations.
Follow Us