ನಿಷ್ಪಕ್ಷಪಾತ ತನಿಖೆ ನಡೆದು ಅಗಲಿದ ಎಸ್ಡಿಎ ಕುಟುಂಬಕ್ಕೆ ನ್ಯಾಯ ಸಿಗಬೇಕು: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ
ಮಾಧ್ಯಮಗಳೊಂದಿಗೆ ಮಾತಾಡುವಾಗ ಲಕ್ಷ್ಮಿ ಹೆಬ್ಬಾಳ್ಕರ್ ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಅನ್ನುತ್ತಾರೆ. ಇದು ನಿಜಕ್ಕೂ ಕನ್ನಡಿಗರಿಗೆ ಗೊತ್ತಿರದ ಸಂಗತಿ, ಸಚಿವರಿಗೆ ಒಬ್ಬರು ಹೆಚ್ಚೆಂದರೆ ಇಬ್ಬರು ಪಿಎಗಳಿರುತ್ತಾರೆ, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ಸಚಿವೆ ತಮ್ಮ ಕಾರ್ಯದರ್ಶಿಗಳೆಂದು ಎಣಿಸುತ್ತಾರೋ?
ಬೆಳಗಾವಿ: ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಸಾವಿಗೆ ಶರಣಾಗುವ ಮೊದಲು ಬರೆದಿರುವ ಡೆತ್ನೋಟ್ನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿಯ ಉಲ್ಲೇಖವಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇಂಥ ಘಟನೆಗಳು ನಡೆಯಬಾರದು, ಮಂಗಳವಾರ ಬಹಳ ಬ್ಯೂಸಿಯಾಗಿದ್ದ ಕಾರಣ ವಿಷಯದ ಬಗ್ಗೆ ತನ್ನಲ್ಲಿ ಮಾಹಿತಿ ಇಲ್ಲ, ಆದರೆ ಎಸ್ಡಿಎ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು, ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರಬೇಕು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿ: ತಹಶೀಲ್ದಾರ್ ಕಚೇರಿಯಲ್ಲೇ ಎಸ್ಡಿಎ ರುದ್ರಣ್ಣ ಆತ್ಮಹತ್ಯೆ
Latest Videos