ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆಗೆ ಒಪ್ಪಿಸುವೆ: ಸಿದ್ದರಾಮಯ್ಯ

|

Updated on: Jul 19, 2024 | 6:07 PM

ಸಿದ್ದರಾಮಯ್ಯ ಅವರ ಮಾತು ಮುಗಿದ ಬಳಿಕ ಇವತ್ತಿನ ಕಾರ್ಯಕಲಾಪಗಳನ್ನು ಕೊನೆಗೊಳಿಸಿದ ಸ್ಪೀಕರ್ ಖಾದರ್ ಅವರು, ರಾಜ್ಯದೆಲ್ಲೆಡೆ ಮಳೆ ಸುರಿಯುತ್ತಿರುವುದರಿಂದ ಊರುಗಳಿಗೆ ತೆರಳುವ ಸದಸ್ಯರು ಸೋಮವಾರ ಬೆಳಗಿನವರೆಗೆ ಕಾಯದೆ ರವಿವಾರ ರಾತ್ರಿಯೇ ಬೆಂಗಳೂರಿಗೆ ಬಂದು ಸೋಮವಾರ ಸರಿಯಾದ ಸಮಯಕ್ಕೆ ಸದನದಲ್ಲಿ ಹಾಜರಿರಬೇಕೆಂದು ತಾಕೀತು ಮಾಡಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸದನದಲ್ಲಿ ವಿರೋಧಪಕ್ಷಗಳ ನಾಯಕರ ವಿರುದ್ಧ ಅಕ್ಷರಶಃ ಬೆಂಕಿಯುಗುಳಿದರು. ಅವರು ಮತ್ತು ಸ್ಪೀಕರ್ ಯುಟಿ ಖಾದರ್ ಹಲವಾರು ಬಾರಿ ಗಲಾಟೆ ಮಾಡದಂತೆ ಬಿಜೆಪಿ ಶಾಸಕರನ್ನು ಕೇಳಿಕೊಂಡರೂ ಸುಮ್ಮನಾಗದಾದಾಗ ಅವರು ವ್ಯಗ್ರರಾದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಾಕತ್ತಿದ್ದರೆ ಅಂತ ತಾಕತ್ತಿನ ಮಾತಾಡತ್ತಿದ್ದ ಬಿಜೆಪಿಗೆ ಜನ ಕೇವಲ 66 ಸೀಟು ಮಾತ್ರ ನೀಡಿ ನಮ್ಮನ್ನು ಅಧಿಕಾರಕ್ಕೆ ತಂದರು ಅಂತ ಸಿದ್ದರಅಮಯ್ಯ ಹೇಳಿದಾಗ ಅರ್ ಅಶೋಕ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಸೋಲಾಗಿದೆ ಎಂದರು. ಬಿಜೆಪಿ ನಾಯಕರು ತಮ್ಮ ಸರ್ಕಾರದ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ, ಇನ್ನು ತಾನು ಸುಮ್ಮನಿರಲ್ಲ ಅವರ ಅಧಿಕಾರಾವಧಿಯಲ್ಲಿ ನಡೆದ ಎಲ್ಲ ಹಗರಣಗಳನ್ನು ತನಿಖೆಗೆ ಒಪ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ 89. 63 ಕೋಟಿ ರೂ. ತೆಲಂಗಾಣಗೆ ಹೋಗಿದೆ ಅನ್ನೋದನ್ನು ಅಂಗೀಕರಿಸಿದ ಸಿಎಂ ಅದನ್ನು ರಿಕವರಿ ಮಾಡುವ ಕೆಲಸ ನಡೆಯುತ್ತಿದೆ ಎಂದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವತ್ತೂ ತನಿಖೆಗೆ ಬಾರದ ಈಡಿ ಈಗ್ಯಾಕೆ ಬಂದಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೂವರು ನಾಯಕರಿಂದ ನನ್ನ ವಿರುದ್ಧ ಷಡ್ಯಂತ್ರ: ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಳಲು