ಚಿಕ್ಕಬಳ್ಳಾಪುರ ರಸ್ತೆ ದುರಂತ; ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಘೋಷಿಸುವಂತೆ ಸಿಎಂಗೆ ಮನವಿ: ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ ರಸ್ತೆ ದುರಂತ; ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಘೋಷಿಸುವಂತೆ ಸಿಎಂಗೆ ಮನವಿ: ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 26, 2023 | 2:47 PM

ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ಬಗ್ಗೆ ತಾನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಫೋನಲ್ಲಿ ಮಾತಾಡಿರುವುದಾಗಿ ಹೇಳಿದ ಈಶ್ವರ್, ಮೃತರ ವಿವರಗಳನ್ನು ಕಳಿಸುವಂತೆ ಸಿಎಂ ಹೇಳಿದ್ದಾರೆ ಎಂದರು. ಮೃತರು ಬಡ ಕುಟುಂಬಗಳ ಹಿನ್ನೆಲೆಯವರಾಗಿರುವುದರಿಂದ ಹೆಚ್ಚು ಮೊತ್ತದ ಪರಿಹಾರವನ್ನು ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡೋದಾಗಿ ಈಶ್ವರ್ ಹೇಳಿದರು.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಇಂದು ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದರ್ಮರಕ್ಕೀಡಾದ 13 ಜನರ ಕುಟುಂಬಗಳ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೆದ್ದಾರಿಗಳಲ್ಲಿ ಟ್ರಕ್ ಟರ್ಮಿನಲ್ ಗಳನ್ನು (truck terminal) ನಿರ್ಮಿಸಿದರೆ ಇಂಥ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದು ಹೇಳಿದರು. ಹೆದ್ದಾರಿಗಳ ಜೊತೆ ಕೆಲ ಕಡೆಗಳಲ್ಲಿ ಸರ್ವಿಸ್ ರಸ್ತೆಗಳಿಲ್ಲದಿರೋದು ಕೂಡ ಅಪಘಾತಗಳಿಗೆ ಕಾರಣವಾಗುತ್ತಿದೆ ಅಂತ ಪತ್ರಕರ್ತರೊಬ್ಬರು ಹೇಳಿದಾಗ ಈಶ್ವರ್, ಸಮೀಕ್ಷೆಯೊಂದನ್ನು ನಡೆಸಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ಬಗ್ಗೆ ತಾನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೊಂದಿಗೆ ಫೋನಲ್ಲಿ ಮಾತಾಡಿರುವುದಾಗಿ ಹೇಳಿದ ಈಶ್ವರ್, ಮೃತರ ವಿವರಗಳನ್ನು ಕಳಿಸುವಂತೆ ಸಿಎಂ ಹೇಳಿದ್ದಾರೆ ಎಂದರು. ಮೃತರು ಬಡ ಕುಟುಂಬಗಳ ಹಿನ್ನೆಲೆಯವರಾಗಿರುವುದರಿಂದ ಹೆಚ್ಚು ಮೊತ್ತದ ಪರಿಹಾರವನ್ನು ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡೋದಾಗಿ ಈಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ