ಜನರ ಆಶೀರ್ವಾದವಿದ್ದರೆ ಇನ್ನೂ ನಾಲ್ಕಾರು ವರ್ಷ ಜನಸೇವೆ ಮಾಡುತ್ತೇನೆ: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Nov 05, 2024 | 5:10 PM

ಅನ್ನದ ಋಣವನ್ನು ತಪ್ಪಿಸಲಾಗದು, ಆ ಋಣ ಎಲ್ಲಿಗೆ ಕರೆದೊಯ್ಯುತ್ತದೆಯೋ ಹೇಳಲಾಗದು ಎಂದ ದೇವೇಗೌಡ, ಮೂರು ತಿಂಗಳವರೆಗೆ ಮಾಧ್ಯಮದವರು ತನ್ನಲ್ಲಿಗೆ ಬರಲಿಲ್ಲ, ತಾನೇನು ಅಂತರಾಷ್ಟ್ರೀಯ ಖ್ಯಾತಿಯ ಅಪರಾಧಿಯಾಗಿದ್ದೆನೇ? ಆಗ ತಾನು ಅನುಭವಿಸಿದ ನೋವು ಕೇವಲ ತನಗೆ ಮಾತ್ರ ಗೊತ್ತು ಎಂದರು.

ರಾಮನಗರ: ಚನ್ನಪಟ್ಟಣದ ವೀರೂಪಾಕ್ಷಿಪುರದಲ್ಲಿ ನಡೆದ ಎನ್​ಡಿಎ ಸಮಾವೇಶದಲ್ಲಿ ಮಾತಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಅಂಬ್ಯುಲೆನ್ಸ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದ ಡಿಕೆ ಸುರೇಶ್​ಗೆ ತಿರುಗೇಟು ನೀಡಿದರು. ಆ ಮಾತು ಯಾರೇ ಹೇಳಿರಲಿ, ಎದೆ ಚಾಚಿ ಹೇಳುತ್ತೇನೆ, ಜನತೆಯ ಆಶೀರ್ವಾದವಿದ್ದರೆ ಇನ್ನೂ ನಾಲ್ಕಾರು ವರ್ಷ ಜನರ ಸೇವೆ ಮಾಡುತ್ತೇನೆ, ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕೋಸ್ಕರ ಹೋರಾಡುತ್ತೇನೆ ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಷ್ಟ ಎಷ್ಟೇ ಬಂದರೂ ಕೊನೇ ಉಸಿರಿರುವವರೆಗೆ ಹೋರಾಡುವುದು ನನ್ನ ಜಾಯಮಾನ: ಹೆಚ್​ಡಿ ದೇವೇಗೌಡ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.