ಆರ್​​ಎಸ್​​ಎಸ್​ ಕಾರ್ಯಕ್ರಮಗಳಲ್ಲಿ ಭಾಗಿಯಾದ ಸರ್ಕಾರಿ ನೌಕರರಿಗೆ ಬಿಗ್ ಶಾಕ್

Updated on: Oct 16, 2025 | 3:15 PM

ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿRSS ಚಟುವಟಿಕೆಗಳನ್ನು ರದ್ದು ಮಾಡಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ಸಿಎಂಗೆ ಬರೆದಿರುವ ಪತ್ರ ಬಾರೀ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ RSS ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗಿಯಾಗುವುದಕ್ಕೂ ಬ್ರೇಕ್ ಹಾಕಬೇಕೆಂದು ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಸರ್ಕಾರಿ ನೌಕರರು ಆರ್​ಎಸ್ಎಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕ ಸಿವಿಲ್ ಸರ್ವಿಸ್​ ರೂಲ್ಸ್ ಇದೆ. ನಿನ್ನೆ, ಮೊನ್ನೆ‌ ಕೆಲವರು ಆರ್​ಎಸ್ಎಸ್ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ನಮ್ಮ ಇಲಾಖೆಯ ಕೆಲವರು ಹೋಗಿದ್ದಾರೆ, ವರದಿ ಕೇಳಿದ್ದು, RSS ಕಾರ್ಯಕ್ರಮಕ್ಕೆ ಹೋಗಿದವರನ್ನು ಸಸ್ಪೆಂಡ್ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು

ಬೆಂಗಳೂರು, (ಅಕ್ಟೋಬರ್ 26): ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿRSS ಚಟುವಟಿಕೆಗಳನ್ನು ರದ್ದು ಮಾಡಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ಸಿಎಂಗೆ ಬರೆದಿರುವ ಪತ್ರ ಬಾರೀ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ RSS ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗಿಯಾಗುವುದಕ್ಕೂ ಬ್ರೇಕ್ ಹಾಕಬೇಕೆಂದು ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಸರ್ಕಾರಿ ನೌಕರರು ಆರ್​ಎಸ್ಎಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕ ಸಿವಿಲ್ ಸರ್ವಿಸ್​ ರೂಲ್ಸ್ ಇದೆ. ನಿನ್ನೆ, ಮೊನ್ನೆ‌ ಕೆಲವರು ಆರ್​ಎಸ್ಎಸ್ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ನಮ್ಮ ಇಲಾಖೆಯ ಕೆಲವರು ಹೋಗಿದ್ದಾರೆ, ವರದಿ ಕೇಳಿದ್ದು, RSS ಕಾರ್ಯಕ್ರಮಕ್ಕೆ ಹೋಗಿದವರನ್ನು ಸಸ್ಪೆಂಡ್ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.