AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್ ಶೆಟ್ಟಿ ಈಗ ಯಾವ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ? ವಿವರಿಸಿದ ನಟ

ರಿಷಬ್ ಶೆಟ್ಟಿ ಈಗ ಯಾವ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ? ವಿವರಿಸಿದ ನಟ

 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Oct 16, 2025 | 2:07 PM

Share

Kantara Chapter 1: ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಬಳಿಕ ರಿಷಬ್ ದೊಡ್ಡ ಗೆಲುವು ಕಂಡರು. ಈಗ ಅವರು ‘ಕಾಂತಾರ: ಚಾಪ್ಟರ್ 2’ ಸಿನಿಮಾ ಮಾಡುತ್ತಾರಾ? ಈ ಬಗ್ಗೆ ಅವರೇ ಸ್ವತಃ ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಯಿತು. ಈಗ ಅವರು ‘ಕಾಂತಾರ: ಚಾಪ್ಟರ್ 2’ ಸಿನಿಮಾ ಮಾಡುತ್ತಾರಾ? ಈ ಬಗ್ಗೆ ಸ್ವತಃ ರಿಷಬ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ‘ಕಾಂತಾರ: ಚಾಪ್ಟರ್ 2 ಬಗ್ಗೆ ಸದ್ಯ ಯೋಚಿಸುತ್ತಿಲ್ಲ. ಜೈ ಹನುಮಾನ್ ಮಾತ್ರ ನನ್ನ ಕೈಯಲ್ಲಿ ಇರುವ ಸಿನಿಮಾ’ ಎಂದು ಹೇಳಿದ್ದಾರೆ. ‘ಜೈ ಹನುಮಾನ್’ ಎಂಬುದು ತೆಲುಗು ಸಿನಿಮಾ. ಈ ಚಿತ್ರದಲ್ಲಿ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ