ಬೆಂಗಳೂರು, (ಸೆಪ್ಟೆಂಬರ್ 08): ಉದ್ಯಮಿ ಹಾಗೂ ವಿಪ್ರೋ(wipro) ಸಂಸ್ಥೆಯ ಚೇರ್ಮೆನ್ ಅಜೀಂ ಪ್ರೇಮ್ಜೀ (Azim Hashim Premji) ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿವಾಸಕ್ಕೆ ಭೇಟಿ ನೀಡಿದ್ದಾರೆ.ಇಂದು (ಸೆಪ್ಟೆಂಬರ್ 08) ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸಕ್ಕೆ ಅಜೀಂ ಪ್ರೇಮ್ಜೀ ಭೇಟಿ ನೀಡಿ ಡಿಕೆ ಶಿವಕುಮಾರ್ ಜೊತೆ ಮಹತ್ವದ ಚರ್ಚೆ ನಡೆಸಿದ್ದು, ಉಭಯ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಇನ್ನು ಅಜೀಂ ಪ್ರೇಮ್ಜೀ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ವಿಪ್ರೋ ಸಂಸ್ಥೆ ದೇಶಕ್ಕೆ ಆಸ್ತಿ. ಸುಮಾರು ಉದ್ಯೋಗ ಸೃಷ್ಟಿ ಮಾಡಿದೆ. ಇದರೊಂದಿಗೆ ಸರ್ಕಾರಕ್ಕೆ ಬರ್ಡನ್ ಕಡಿಮೆ ಮಾಡುತ್ತಿದೆ . ನಮ್ಮಿಂದ ಎಲ್ಲಾ ಸಹಕಾರ ಕೊಡಲಾಗುತ್ತಿದೆ. ಗ್ರಾಮೀಣ ಶಿಕ್ಷಣ ಬಗ್ಗೆ ಅವರ ಆಸೆ ಸಹಕಾರ ಇದೆ. ಅದಕ್ಕಾಗಿ ನಾನು ಅವರಿಗೆ ಸಂಪೂರ್ಣ ಸಹಕಾರ ಕೊಡತ್ತಿದ್ದೇನೆ. ನಾವೆಲ್ಲಾ ಸೇರಿ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದರು.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ