ಟಿವಿ9 ಸ್ವೀಟ್ ಹೋಮ್ ಎಕ್ಸ್ ಪೋ 2023ಗೆ ಚಾಲನೆ, ನಾಯಂಡಹಳ್ಳಿಯ ನಂದಿ ಲಿಂಕ್ಸ್ ಮೈದಾನದಲ್ಲಿ ಇಂದಿನಿಂದ 3-ದಿನದ ಮೇಳ!
ಎಕ್ಸ್ಪೋನಲ್ಲಿ 50 ಕ್ಕೂ ಹೆಚ್ಚು ಬಿಲ್ಡರ್ಸ್ ಮತ್ತು ಡೆವಲಪರ್ಸ್, ಇಂಟಿರಿಯರ್ಸ್, ಗೃಹಸಾಲ ನೀಡುವ ಕಂಪನಿಗಳು ಭಾಗಿಯಾಗಿವೆ. ಎಕ್ಸ್ಪೋದ ಮೊದಲ ದಿನವೇ ಅದಕ್ಕೆ ಸ್ಟಾರ್ ವ್ಯಾಲ್ಯೂ ಒದಗಿ ಬಂದಿದ್ದು ವಿಶೇಷ. ಖ್ಯಾತ ನಟ ಕೋಮಲ್, ನಟಿಯರಾದ ಚಂದ್ರಲೇಖಾ, ಶರಣ್ಯ ಶೆಟ್ಟಿ ಆಗಮಿಸಿದ್ದನ್ನು ನೋಡಬಹುದು.
ಬೆಂಗಳೂರು: ಟಿವಿ9 ಕನ್ನಡ ವಾಹಿನಿ ನಿಯಮಿತವಾಗಿ ನಡೆಸುವ ಟಿವಿ9 ರಿಯಲ್ ಎಸ್ಟೇಟ್ ಮತ್ತು ಫರ್ನಿಚರ್ ಎಕ್ಸ್ ಪೋ (ಟಿವಿ9 ಸ್ವೀಟ್ ಹೋಮ್ ಎಕ್ಸ್ ಪೋ) (Tv9 Sweet Home Expo 2023) 14ನೇ ಆವೃತ್ತಿಗೆ ಚಾಲನೆ ನೀಡಲಾಗಿದೆ. ಇಂದಿನಿಂದ 3 ದಿನಗಳ ಕಾಲ (ಸೆಪ್ಟೆಂಬರ್ 8 ರಿಂದ 10) ಎಕ್ಸ್ ಪೋ ಅನ್ನು ಈ ಬಾರಿ ನಗರದ ನಾಯಂಡಹಳ್ಳಿಯಲ್ಲಿರುವ ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ (Nandi Links Grounds) ಆಯೋಜಿಸಲಾಗುತ್ತಿದೆ. ಎಕ್ಸ್ ಪೋನಲ್ಲಿ 50 ಕ್ಕೂ ಹೆಚ್ಚು ಬಿಲ್ಡರ್ಸ್ ಮತ್ತು ಡೆವಲಪರ್ಸ್ (Builders and Developers), ಇಂಟಿರಿಯರ್ಸ್, ಗೃಹಸಾಲ ನೀಡುವ ಕಂಪನಿಗಳು ಭಾಗಿಯಾಗಿವೆ. ಎಕ್ಸ್ ಪೋದ ಮೊದಲ ದಿನವೇ ಅದಕ್ಕೆ ಸ್ಟಾರ್ ವ್ಯಾಲ್ಯೂ ಒದಗಿ ಬಂದಿದ್ದು ವಿಶೇಷ. ಖ್ಯಾತ ನಟ ಕೋಮಲ್, ನಟಿಯರಾದ ಚಂದ್ರಲೇಖಾ, ಶರಣ್ಯ ಶೆಟ್ಟಿ ಆಗಮಿಸಿದ್ದನ್ನು ನೋಡಬಹುದು. ಕೋಮಲ್ ಮೇಳವನ್ನು ಉದ್ಘಾಟಿಸಿದರು. ಟಿವಿ9 ಕನ್ನಡ ವಾಹಿನಿಯ ಹಿರಿಯ ವೈಸ್ ಪ್ರೆಸಿಡೆಂಟ್ ನೋಬೆಲ್ ಜಯಕರ್ ದೀಪ ಬೆಳಗುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುನೀತ್ ರಾಜ್ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ

ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ

ಕೋರ್ಟ್ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
