Karnataka Assembly Polls 2023; ಜೈ ಬಜರಂಗ ಬಲಿ ಅಂತ ಹೇಳಲು ಹೇಸುವ ಕಾಂಗ್ರೆಸ್ ತುಷ್ಟೀಕರಣದ ದಾಸ್ಯತ್ವದಲ್ಲಿ ಸಿಲುಕಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

ಮಠಾಧೀಶರು, ಸಂತರ ಆಶೀರ್ವಾದ ಹಾಗೂ ಜನರ ಅಭಿಮಾನ ಮತ್ತು ಪ್ರೀತಿಯಿಂದ ಡಬಲ್ ಎಂಜಿನ್ ಸರ್ಕಾರ ಪುನಃ ಅಧಿಕಾರಕ್ಕೆ ಬರೋದು ಈಗಾಗಲೇ ದೃಢಪಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Karnataka Assembly Polls 2023; ಜೈ ಬಜರಂಗ ಬಲಿ ಅಂತ ಹೇಳಲು ಹೇಸುವ ಕಾಂಗ್ರೆಸ್ ತುಷ್ಟೀಕರಣದ ದಾಸ್ಯತ್ವದಲ್ಲಿ ಸಿಲುಕಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
|

Updated on: May 05, 2023 | 7:31 PM

ತುಮಕೂರು: ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  (PM Narendra Modi) ಬೃಹತ್ ಸಮಾವೇಶವೊಂದನ್ನು ಉದ್ದೇಶಿಸಿ ಮಾತಾಡಿದರು. ಇಲ್ಲೂ ಅವರು ಕನ್ನಡದಲ್ಲೇ ಭಾಷಣವನ್ನು ಆರಂಭಿಸಿದರು. ಸಿದ್ದಗಂಗಾ ಮಠದ ಶ್ರೀಗಳು ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನವನ್ನು ವಂದಿಸಿದ ಪ್ರಧಾನಿ, ಮಠಾಧೀಶರು, ಸಂತರ ಆಶೀರ್ವಾದ ಹಾಗೂ ಜನರ ಅಭಿಮಾನ ಮತ್ತು ಪ್ರೀತಿಯಿಂದ ಡಬಲ್ ಎಂಜಿನ್ ಸರ್ಕಾರ (doble engine government) ಪುನಃ ಅಧಿಕಾರಕ್ಕೆ ಬರೋದು ಈಗಾಗಲೇ ದೃಢಪಟ್ಟಿದೆ ಎಂದು ಹೇಳಿದರು. ಮತ್ತೊಮ್ಮೆ ಜನರಿಂದ ಬಜರಂಗ ಬಲಿ ಕೀ ಜೈ ಎಂದು ಹೇಳಿಸಿದ ಪ್ರಧಾನಿ ಮೋದಿ, ರಾಷ್ಟ್ರಕವಿ ಕುವೆಂಪು (Kuvempu) ಅವರು ತಮ್ಮ ಕವಿತೆಯೊಂದರಲ್ಲಿ ಓ ಲಂಕಾ ಭಯಂಕರ, ಸಮೀರ ಕುಮಾರ ಹೇ ಆಂಜನೇಯ ಅಂತ ಬರೆದಿರುವುದನ್ನು ಉಲ್ಲೇಖಿಸಿ ಅಂಥ ಮಹಾನ್ ಕವಿಯೇ ಆಂಜನೇಯನ ಬಗ್ಗೆ ಹಾಗೆ ಹೇಳಿರಬೇಕಾದರೆ, ಕಾಂಗ್ರೆಸ್ ನಾಯಕರಿಗೆ ಜೈ ಬಜರಂಗ ಬಲಿ ಅಂತ ಹೇಳಲೂ ತೊಂದರೆಯಾಗುತ್ತಿದೆ ಎಂದರು. ಕಾಂಗ್ರೆಸ್ ಪಕ್ಷ ಈಗ ತುಷ್ಟೀಕರಣದ ದಾಸ್ಯತ್ವದಲ್ಲಿ ಸಿಲುಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us