Karnataka Assembly Polls: ಶಿರಸಿ-ಸಿದ್ದಾಪುರ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ಪ್ರಚಾರ ಮಾಡಿದ ಶಿವರಾಜ್ಕುಮಾರ್
ತಾನು ಕ್ಷೇತ್ರದಲ್ಲಿ ಪ್ರವೇಶ ಮಾಡುತ್ತಿದ್ದಂತೆಯೇ ಪಾಸಿಟಿವ್ ವೈಬ್ಸ್ ಸಿಕ್ಕವು ಎಂದು ಶಿವರಾಜ್ಕುಮಾರ್ ಹೇಳಿದರು.
ಕಾರವಾರ: ನಿನ್ನೆ ಸಿದ್ದರಾಮಯ್ಯ (Siddaramaiah) ಪರ ವರುಣದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಚಿತ್ರನಟ ಶಿವರಾಜ್ ಕುಮಾರ್ (Shivarajkumar) ಅವರು ಇಂದು ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮತ ಯಾಚಿಸಿದರು. ಅವರೊಂದಿಗೆ ಪತ್ನಿ ಗೀತಾ ಸಹ ಇದ್ದರು. ಇದೇ ಸಂದರ್ಭದಲ್ಲಿ ಕಾರವಾರದ ಟಿವಿ9 ಕನ್ನಡ ಪ್ರತಿನಿಧಿಯೊಂದಿಗೆ ಮಾತಾಡಿದ ಶಿವರಾಜ ಕುಮಾರ್ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ತಾನು ಕ್ಷೇತ್ರದಲ್ಲಿ ಪ್ರವೇಶ ಮಾಡುತ್ತಿದ್ದಂತೆಯೇ ಪಾಸಿಟಿವ್ ವೈಬ್ಸ್ ಸಿಕ್ಕವು ಎಂದು ಹೇಳಿದರು. ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ (Bhimanna Naik) ಬಗ್ಗೆ ಮಾತಾಡಿದ ಶಿವರಾಜಕುಮಾರ್, ಅವರೊಂದಿಗೆ ಸುಮಾರು 4 ದಶಕಗಳ ಬಾಂಧವ್ಯವಿದೆ, ಬಹಳ ಒಳ್ಳೆಯ ವ್ಯಕ್ತಿ, ಅವರು ಒಬ್ಬ ಯಶಸ್ವೀ ಕೃಷಿಕನಾಗಿರುವ ಜೊತೆಗೆ ಸಫಲ ಉದ್ಯಮಿಯೂ ಆಗಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

